ಬೆಂಗಳೂರು: ಹರಿಯಾಣದ ಸೂರಜ್ಕುಂಡ್ ಮೇಳದ ಮಾದರಿಯಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಕರಕುಶಲ ಮೇಳ ಹಾಗೂ ಸಂತೆ ಆಯೋಜಿಸಲು ಸರ್ಕಾರ ನಿರ್ಧರಿಸಿದೆ.

ಪ್ರವಾಸೋದ್ಯಮ ವಲಯದ ಒಟ್ಟಾರೆ ಅಭಿವೃದ್ಧಿಗೆ ಬಜೆಟ್ನಲ್ಲಿ ರೂ 347 ಕೋಟಿ ಅನುದಾನ ನೀಡಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಬಲವರ್ಧನೆ ಮತ್ತು ಕಾರ್ಯ ಚಟುವಟಿಕೆಗಳ ಉತ್ತೇಜನಕ್ಕೆ ರೂ 60 ಕೋಟಿ ಒದಗಿಸಲಾಗಿದೆ.

ಬಜೆಟ್ನ ಇತರೆ ಕೆಲವು ಮುಖ್ಯಾಂಶಗಳು..
*ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವರ್ಗದವರಿಗೆ ಆತಿಥ್ಯ ಕ್ಷೇತ್ರದಲ್ಲಿ ಅಲ್ಪಾವಧಿ ತರಬೇತಿ.
* ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಕ ಹಾಗೂ ಪುನರ್ರಚನೆಗೆ ರೂ 2 ಕೋಟಿ ಅನುದಾನ.
*ಪ್ರವಾಸೋದ್ಯಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಹಾಗೂ ಕರ್ನಾಟಕದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಯೋಜನೆಗೊಳಿಸಲು ಪ್ರವಾಸೋದ್ಯಮ ವ್ಯಾಪಾರ ಸೌಕರ್ಯ ಕಾಯ್ದೆ ಜಾರಿ.
*ಒಂದೇ ಸೂರಿನಡಿ ಎಲ್ಲಾ ಪ್ರವಾಸಿ ಸೇವೆಗಳನ್ನು ಒದಗಿಸಲು ವಿಶ್ವ ಪಾರಂಪರಿಕ ತಾಣಗಳಾದ ಹಂಪಿ ಮತ್ತು ಪಟ್ಟದಕಲ್ಲಿನಲ್ಲಿ ಪ್ರವಾಸಿ ಪ್ಲಾಜಾಗಳ ನಿರ್ಮಾಣ.
*ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯ.
*ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಪ್ರವಾಸಿ ಟ್ಯಾಕ್ಸಿಗಳ ವಿತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.