ಶನಿವಾರ, ಫೆಬ್ರವರಿ 27, 2021
31 °C

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಜ್ರಾ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಜ್ರಾ ನಿಧನ

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಮೌಂಟೆನ್‌ ವ್ಯೂ ಶಾಲೆ ಸಂಸ್ಥಾಪಕಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಜ್ರಾ (76)  ಗುರುವಾರ ಬೆಳಿಗ್ಗೆ ನಿಧನರಾದರು.



ಅಜ್ರಾ  ಅನೇಕ ವರ್ಷಗಳಿಂದ ಮೌಂಟೆನ್‌ ವ್ಯೂ ಶಿಕ್ಷಣ ಸಂಸ್ಥೆಯ ಆಧಾರಸ್ತಂಭವಾಗಿ ಅದನ್ನು ಬೆಳೆಸಿ­ದ್ದರು. ಆ ಸಂಸ್ಥೆಯ ಪ್ರಾಂಶುಪಾಲರಾಗಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯ­ನಿರ್ವಹಿಸಿದ್ದರು.ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಕುವೆಂಪು ವಿಶ್ವವಿದ್ಯಾ­ನಿಲಯ ಅವರಿಗೆ 2012ರಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿದೆ.



ಅಜ್ರಾ ಅವರಿಗೆ ಮೌಂಟೆನ್‌ ವ್ಯೂ ಶಾಲೆಯ ಕಾರ್ಯದರ್ಶಿಯಾಗಿರುವ ಪುತ್ರಿ ಹಬೀಬಾ ಎನ್. ಪಾಷಾ ಹಾಗೂ ಅಳಿಯ ನಿಸಾರ್ ಪಾಷಾ ಇದ್ದಾರೆ. ಅಜ್ರಾ ಅವರ ಅಂತ್ಯಕ್ರಿಯೆ ರಾಮನ­ಹಳ್ಳಿ ಖಬರಸ್ಥಾನದಲ್ಲಿ ಗುರು­ವಾರ ಸಂಜೆ ನೆರವೇರಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.