ಹಾವೇರಿ: `ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಮುನ್ನವೇ ರಾಜ್ಯ ವಿಧಾನ ಸಭೆಗೆ ಚುನಾವಣೆ ಎದುರಾಗಲಿದ್ದು, ಜೆಡಿಎಸ್ ಕಾರ್ಯಕರ್ತರು ಈಗಿನಿಂದಲೇ ಚುನಾವಣೆ ತಯಾರಿ ಆರಂಭಿಸಿ ಬರುವ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವಂತೆ ಮಾಡಬೇಕೆಂದು~ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಅಧಿಕಾರವಧಿ ಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜಾರಿಗೆ ತರಲಾದ ನೂತನ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಮೋಸ ಮಾಡುವುದರ ಜತೆಗೆ ರಾಜ್ಯದ ಜನತೆಗೆ ಮಾಡಬಾರದ ಅನಾಚಾರಗಳನ್ನು ಮಾಡಿದರು. ರೈತರ ಸಾಲಮನ್ನಾ ಕುರಿತಂತೆ ನಿರ್ಲಕ್ಷ್ಯ ತಾಳಿದರು. ಕೇಂದ್ರದ ಕಾಂಗ್ರೆಸ್ ಸರ್ಕಾರವೂ ಈ ಕುರಿತಂತೆ ತೀವ್ರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿದರು.

ತಮ್ಮದು ಮೊದಲ ಹಂತದ ರಾಜ್ಯ ಪ್ರವಾಸ ಇದಾಗಿದ್ದು, ಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ರೈತ ಸಮಾವೇಶ ನಡೆಸುವ ಚಿಂತನೆ ನಡೆದಿದೆ. ಪ್ರತಿ ಸಮಾವೇಶದಲ್ಲಿ 50ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿದ್ದ ನೆರೆ ಸಂತ್ರಸ್ಥರ ಸ್ಥಿತಿ ಇವತ್ತಿಗೂ ಬದಲಾವಣೆ ಕಂಡಿಲ್ಲ. ಇಂದಿಗೂ ರಸ್ತೆ ಬದಿಗಳಲ್ಲಿ ಕೆಟ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೇ ಬಿಜೆಪಿ ಸರ್ಕಾರದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರಾಜ್ಯ ರಾಜಕಾರಣ, ಆಡಳಿತ ಭವನದಲ್ಲಿ ದಿನಕ್ಕೊಂದು ಬಣ್ಣ ಪಡೆದುಕೊಳ್ಳುತ್ತಿದೆ ಎಂದು ದೂರಿದರು.

ರೈತಪರ ಸರ್ಕಾರ ಎಂದು ಕರೆದುಕೊಳ್ಳುತ್ತಿರು ಬಿಜೆಪಿ ಸರ್ಕಾರ ಭತ್ತ, ದಾಳಿಂಬೆ, ಕಬ್ಬು, ಹತ್ತಿ, ಮೆಣಸಿನಕಾಯಿಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಕೆಲ ಕಡೆಗಳಲ್ಲಿ ರೈತ ಹೋರಾಟಗಳು ತೀವ್ರಗೊಂಡ ಕಾರಣ ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಅದಕ್ಕೆ ಪೂರಕವಾದ ಸಹಾಯಧನ ಇಂದಿಗೂ ಬಿಡುಗಡೆಯಾಗಿಲ್ಲ. ಇದರಿಂದಲೇ ಅವರ ರೈತಪರ ಧೋರಣೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.

ಭಾಗ್ಯ ಜ್ಯೋತಿ, ಸಂಧ್ಯಾಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನ ನೀಡದೇ ಜನತೆಯನ್ನು ಗೋಳಾಡಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದ ನೆಲಕಚ್ಚಲಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ರೈತರ ಸಾಲಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

ಯುವ ಜನರ ಒಲವು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಹಿಂದಿನ ಚುನಾವಣೆಯಲ್ಲಿ ಬಹಳಷ್ಟು ಯುವಕರು ಬಿಜೆಪಿಗೆ ಬೆಂಬಲಿಸಿದ್ದರು. ಆ ಪಕ್ಷದಿಂದ ಏನಾದರೂ ಬದಲಾವಣೆಯಾಗಲಿದೆ ಎಂಬ ಆಶಾವಾದ ಹೊಂದಿದ್ದರು. ನಂತರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ನಡೆದ ಭ್ರಷ್ಟಚಾರ, ಆ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಯುವ ಜನರಿಗೆ ಭ್ರಮನಿರಸನ ಮೂಡಿಸಿದೆ. ಆ ಯುವ ಸಮುದಾಯ ಜೆಡಿಎಸ್ನತ್ತ ಒಲವು ತೋರುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಮಾಜಿ ಮುಖ್ಯಮಂತ್ರಿಯವರು ಯುವಕರಾಗಿದ್ದು, ಅವರ ನೇತೃತ್ವದಲ್ಲಿ ನಡೆದ 20 ತಿಂಗಳ ಅಧಿಕಾರ ಜನತೆಗೆ ಇಂದಿಗೂ ಜನಮನ್ನಣೆ ಪಡೆದಿದೆ. ತಾವು ಹೋದಲೆಲ್ಲ. ಜನರು ಆ ಸಂದರ್ಭದಲ್ಲಿನ ಆಡಳಿತವನ್ನು ಮೆಲಕು ಹಾಕುತ್ತಿರುವುದನ್ನು ಗಮನಿಸಿದರೆ, ಅದೆಷ್ಟು ಪ್ರಭಾವ ಬೀರಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಸಮಾವೇಶದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಗಾಜಿಗೌಡ್ರ, ಬಸವರಾಜ ಹೊಸಮನಿ, ರಾಜಣ್ಣ ಕೋರವಿ, ಎನ್.ಎಚ್.ಕೋನರಡ್ಡಿ, ಕಮಲಾ ನಾಯ್ಕ ಸೇರಿದಂತೆ ಹಲವರು ಹಾಜರಿದ್ದರು. ಫಕ್ಕೀರಪ್ಪ ಭಜಂತ್ರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.