ನವದೆಹಲಿ:  ಜಲ್ಲಿ ಕಲ್ಲು ಕ್ರಷರ್ ಘಟಕಗಳನ್ನು ಸ್ಥಳಾಂತರಗೊಳಿಸುವಂತೆ ಕಳೆದ ವರ್ಷ ನೀಡಿದ್ದ ತನ್ನ ಆದೇಶವನ್ನು ಜಾರಿಗೊಳಿಸಲು ವಿಫಲವಾದ ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಯನ್ನು ಶುಕ್ರವಾರ ಕಟುವಾಗಿ ಟೀಕಿಸಿರುವ ಸುಪ್ರೀಂಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕ್ರಷರ್ ಘಟಕಗಳನ್ನು ಸ್ಥಳಾಂತರಿಸುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಕಲ್ಲುಗಣಿ ಮಾಲೀಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ನ್ಯಾಯಾಲಯದ ಆದೇಶವನ್ನು ಯಾರೂ ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಕ್ರಷರ್ ಘಟಕಗಳನ್ನು ಜನವಸತಿ ಪ್ರದೇಶಗಳಿಂದ ಕನಿಷ್ಠ ಪಕ್ಷ ಒಂದು ಕಿ. ಮೀ ದೂರದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೊರ್ಟ್ ಕಳೆದ ಏಪ್ರಿಲ್ 8ರಂದು ಆದೇಶ ನೀಡಿತ್ತು. ಘಟಕಗಳ ಸ್ಥಳಾಂತರಕ್ಕೆ ಒಂದು ವರ್ಷದ ಗಡುವು ವಿಧಿಸಿತ್ತು. ಕ್ರಷರ್ ಘಟಕಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಸುರಕ್ಷಿತ ವಲಯ ನಿರ್ಮಿಸಬೇಕು. ಜಿಲ್ಲಾ ಕೇಂದ್ರದಿಂದ ಈ ವಲಯ ನಾಲ್ಕು ಕಿ.ಮೀ. ಮತ್ತು ಪಾಲಿಕೆ ವ್ಯಾಪ್ತಿಯಿಂದ ಎಂಟು ಕಿ.ಮೀ. ದೂರದಲ್ಲಿರಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು.

ಎರಡು ವಲಯಗಳ ಮಧ್ಯೆ ಕನಿಷ್ಠ 50 ಕಿ.ಮೀ ಅಂತರವಿರಬೇಕು. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಿಂದ ಎರಡು ಕಿ.ಮೀ. ಮತ್ತು ಗ್ರಾಮ, ಶಾಲೆ, ನದಿ, ದೇವಸ್ಥಾನಗಳಿಂದ ಒಂದು ಕಿ.ಮೀ. ದೂರವಿರಬೇಕು ಎಂಬ ಷರತ್ತು ವಿಧಿಸಿತ್ತು.ಕ್ರಷರ್ ಘಟಕಗಳ ಸ್ಥಳಾಂತರಿಸಲು ಸುರಕ್ಷಿತ ವಲಯಗಳನ್ನು ಗುರುತಿಸುವಂತೆ ಹೈಕೋರ್ಟ್ ಕೂಡ 1998ರಲ್ಲಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು.

ರಾಜ್ಯದಲ್ಲಿ ಇಂತಹ ಯಾವುದೇ ಸುರಕ್ಷಿತ ವಲಯ ಇಲ್ಲದಿರುವ ಕಾರಣ ಆದೇಶದಲ್ಲಿ ಬದಲಾವಣೆ ಕೋರಿ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿತ್ತು.ಗಣಿ ಮಾಲೀಕರ ಸಂಘ, ಮಂಗಳೂರು ಮತ್ತು ಕರ್ನಾಟಕ ಜಲ್ಲಿ ಕಲ್ಲು ತಯಾರಿಕಾ ಘಟಕ (ಕ್ರಷರ್) ಸಂಘಗಳು ಕೂಡ ಕರ್ನಾಟಕ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ 2009ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.