ಭಾನುವಾರ, ಆಗಸ್ಟ್ 9, 2020
21 °C

ರಾಜ್ಯ ಹೆದ್ದಾರಿ ಕಾಮಗಾರಿ: ಶಂಕುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಹೆದ್ದಾರಿ ಕಾಮಗಾರಿ: ಶಂಕುಸ್ಥಾಪನೆ

ಸುರಪುರ: ತಾಲ್ಲೂಕಿನಲ್ಲಿ ನೆನಗುದಿಗೆ ಬಿದ್ದಿರುವ ಎಲ್ಲ ರಸ್ತೆಗಳ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಅವಶ್ಯವಿದ್ದೆಡೆ ಹೊಸ ರಸ್ತೆ ಕಾಮಗಾರಿಗೆ ಮಂಜೂರಿ ಪಡೆದುಕೊಳ್ಳಲಾಗುವುದು. ರಸ್ತೆ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರ ರಸ್ತೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.ಕೆಂಭಾವಿ ಮಾರ್ಗವಾಗಿ ಹೋಗುವ ಸುರಪುರ-ಹುನಗುಂದ ರಾಜ್ಯ ಹೆದ್ದಾರಿ ಕಾಮಗಾರಿಗೆ ಬುಧವಾರ ಇಲ್ಲಿನ ಗುಡ್ಡದರಾಯನ ಗುಡಿ ಬಳಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಪಿ.ಡಬ್ಲು.ಡಿ. ಇಲಾಖೆಯಿಂದ ಈ ರಸ್ತೆಯನ್ನು ರೂ. 48 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕಿ.ಮೀ 83 ರಿಂದ 129 ವರೆಗೆ ರಸ್ತೆ ಸುಧಾರಣೆಯಾಗಲಿದೆ. ತಿಂಥಣಿ-ಬಲಶೆಟ್ಟಿಹಾಳ ರಸ್ತೆ 0 ಕಿ.ಮೀ ದಿಂದ 20 ಕಿಮಿವರೆಗೆ ಸುಧಾರಣೆ ಕಾಮಗಾರಿ ನಡೆಯಲಿದೆ. ಕೊಡೇಕಲ್-ತಾಳಿಕೋಟಿ ಜಿಲ್ಲಾ ಮುಖ್ಯ ರಸ್ತೆ 0 ಕಿಮಿ ದಿಂದ 9.84 ಕಿಮಿವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.ಕಾಮಗಾರಿ ಕಳಪೆಯಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬಗೆಯಬೇಕು. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಮೂಲ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದರು.ಎಇಇ ಟಿ. ಪ್ರಹ್ಲಾದ ಮಾತನಾಡಿದರು. ಮುಖಂಡರಾದ ಶಿವಣ್ಣ ಮಂಗಿಹಾಳ, ಸೂಲಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿಠಲ ಯಾದವ, ತಾಲ್ಲೂಕು ಪಂಚಾಯಿತಿ ಸದಸ್ಯ ಮಾನಪ್ಪ ಸುಗೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ ಬೇಟೆಗಾರ, ರಾಜಾ ವಾಸುದೇವನಾಯಕ, ವೆಂಕೋಬ, ಶರಣಗೌಡ, ಇಇ ಮೋಹನ ದೇಶಮುಖ, ಪುರಸಭೆ ಸದಸ್ಯ ಮಲ್ಲಣ್ಣ ಐಕೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.