ಬುಧವಾರ, ಮೇ 12, 2021
27 °C

ರಾಜ ವಿನ್ಯಾಸದ ಎಡ್ವರ್ಡಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಿಂಗ್‌ಹ್ಯಾಮ್ ರಸ್ತೆ ಬಳಿಯ ಎಡ್ವರ್ಡ್ ರಸ್ತೆಯಲ್ಲಿ ಪ್ರೆಸ್ಟೀಜ್ ಸಮೂಹದ ಐಷಾರಾಮಿ ವಸತಿ ಯೋಜನೆ `ಪ್ರೆಸ್ಟೀಜ್ ಎಡ್ವರ್ಡಿಯನ್~ ಆರಂಭವಾಗಿದೆ.40,000 ಚದರ ಅಡಿಯ ಈ ಅಪಾರ್ಟ್‌ಮೆಂಟ್‌ಗೆ ಎಡ್ವರ್ಡಿಯನ್ ಶೈಲಿಯ ವಾಸ್ತುಶಿಲ್ಪ ಬಳಸಿ ವಿನ್ಯಾಸಗೊಳಿಸಲಾಗಿದೆ. ಈ ವಾಸ್ತು ಶೈಲಿ 1901 ಮತ್ತು 1914 ನಡುವೆ ಬ್ರಿಟನ್‌ನಲ್ಲಿ ಎಡ್ವರ್ಡ್ ದೊರೆಯ ಆಳ್ವಿಕೆಯ ಸಮಯದಲ್ಲಿ ಚಾಲ್ತಿಯಲ್ಲಿತ್ತು.

2 ಗೋಪುರಗಳು 14 ಮಹಡಿಗಳ ಈ ಕಟ್ಟಡದಲ್ಲಿ ಕೇವಲ 26 ಅಪಾರ್ಟ್‌ಮೆಂಟ್‌ಗಳಿವೆ.

ಈ ಪೈಕಿ 2 ಪೆಂಟ್‌ಹೌಸ್. ಇಟ್ಟಿಗೆ ಮತ್ತು ಲೋಹ ಲೇಪನದ ವ್ಯಾಪಕ ಬಳಕೆಯನ್ನು ಇಲ್ಲಿ ಕಾಣಬಹುದು.  ಎಡ್ವರ್ಡಿಯನ್ ಶೈಲಿಯಲ್ಲಿ ಮೂರು ಕಡೆಗಳಲ್ಲಿ ಕಟ್ಟಡ ಹೊದಿಕೆಗಳು, ಕಂಬಗಳ ಸಾಲುಗಳು ವೈಶಾಲ್ಯವನ್ನು ಇಲ್ಲಿ ಕಾಣಬಹುದು. ವಿಶಿಷ್ಟ ಅಲಂಕರಣದ ಪ್ರವೇಶ ದ್ವಾರ, ಗೋಪುರದ ವಿಶಿಷ್ಟ ವಾಸ್ತು ಶೈಲಿ, ಅಲಂಕೃತ ಛಾವಣಿ ಇದರ ವಿಶೇಷ. ಬೆಂಗಳೂರು ವೇಗವಾಗಿ ತನ್ನ ಹಸಿರು ಹೊದಿಕೆಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರೆಸ್ಟೀಜ್ ಎಡ್ವರ್ಡಿಯನ್‌ನ ಭಿನ್ನ ಮತ್ತು ವಿಶಿಷ್ಟ ವಾಸ್ತುಶಿಲ್ಪ ನಗರದ ಹೆಗ್ಗುರುತಾಗಲಿದೆ ಎನ್ನುತ್ತಾರೆ  ಪ್ರೆಸ್ಟೀಜ್ ಸಮೂಹದ ಸಿಎಂಡಿ ಇರ್ಫಾನ್ ರಜಾಕ್. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.