`ರಾಜ ಹಕ್ಕಿ~ ಭಾರತದ ಅತಿ ಸುಂದರವಾದ ಬಾಲದಂಡೆ ಹಕ್ಕಿಗಳಲ್ಲೊಂದು. ಪಿಕಳಾರ ಗಾತ್ರದ ಬೆಳ್ಳಗಿನ ಉದ್ದಬಾಲದ ಬಿಳಿ ಬಣ್ಣದ ಸುಂದರ ಪಕ್ಷಿಯಿದು. ಇದಕ್ಕೆ ಏಶಿಯನ್ ಪ್ಯಾರಾಡೈಸ್-ಫ್ಲೈಕ್ಯಾಚರ್ ಎಂದು ಹೆಸರು. ಇದರ ರೆಕ್ಕೆಯ ತುದಿ ಬೂದು ಬಣ್ಣದಿಂದ ಕೂಡಿರುತ್ತದೆ. ಬಾಲದ ತಳದಿಂದ ಎರಡು ನೀಳವಾದ ಗರಿಗಳು ಹೊಮ್ಮಿರುತ್ತವೆ.

ಗಂಡು ಪಕ್ಷಿಯು ಹಾರುವಾಗ ಬಿಳಿ ಗರಿಗಳು ಗಾಳಿಪಟದ ಬಾಲಂಗೋಚಿಯಂತೆ ಆಕರ್ಷಕವಾಗಿ ಕಾಣುತ್ತದೆ.

ರೂಪದಲ್ಲಷ್ಟೇ ಅಲ್ಲ, ಗಂಡು ಮತ್ತು ಹೆಣ್ಣು `ರಾಜ ಹಕ್ಕಿ~ಗಳ ಧ್ವನಿಯಲ್ಲಿ ಕೂಡ ವ್ಯತ್ಯಾಸ ಕಂಡು ಬರುತ್ತವೆ. ಇಲ್ಲಿ, `ಚೆಲುವೆಲ್ಲಾ ನಂದೆಂದು~ ಹಾಡುವುದು ಗಂಡು ಹಕ್ಕಿ. ಅದು ನೋಡಲಿಕ್ಕೆ ಆಕರ್ಷಕ. ಹೆಣ್ಣು ಹಕ್ಕಿಯ ಎದೆ ಮತ್ತು ಹೊಟ್ಟೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಇತರ ಭಾಗ ಕಂದು ಬಣ್ಣ. ಇದಕ್ಕೆ ಉದ್ದ ಬಾಲ ಇರುವುದಿಲ್ಲ.

ಬಾಲದಂಡೆಯ ಗಂಡುಹಕ್ಕಿಯು ತಲೆ, ಜುಟ್ಟು, ಗಲ್ಲ, ಕಡು ನೀಲಿಗಪ್ಪು ಬಣ್ಣ ಹೊಂದಿರುತ್ತದೆ. ಇದರ ದೇಹವು ಹೊಳೆಯುವ ಅಚ್ಚ ಬಿಳಿ ಬಣ್ಣದಿಂದ ಕೂಡಿದ್ದು ರೆಕ್ಕೆಯಲ್ಲಿ ಕಪ್ಪು ಬಣ್ಣವಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ 50 ಸೆಂ.ಮೀ. ಉದ್ದವಾದ ಎರಡು ಬಿಳಿಗರಿಗಳು ಗಂಡು ಹಕ್ಕಿಗಳಿಗೆ ಇರುತ್ತವೆ. ಹಾರಾಡುವಾಗ ಗಂಡು ಹಕ್ಕಿಯ ರಿಬ್ಬನ್ನಿನಂತಹ ಬಾಲಗಳು ಮನಮೋಹಕವಾಗಿರುತ್ತದೆ.

ಸಂತಾನ ಋತುವಿನಲ್ಲಿ ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ಗಂಡು ಹಕ್ಕಿಯು ನರ್ತಿಸುತ್ತದೆ, ಹಾಡುತ್ತದೆ, ಅಂಗಚೇಷ್ಟೆಯಲ್ಲಿ ತೊಡಗುತ್ತದೆ. ಗೂಡು ಕಟ್ಟುವ ಕ್ರಿಯೆಯಲ್ಲಾಗಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಾಗಲಿ, ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಸಮನಾಗಿ ಹಂಚಿಕೊಳುತ್ತವೆ.

ಈ ಹಕ್ಕಿ ಜೋಡಿಗಳನ್ನು ಹಸಿರೆಲೆ, ಬಿದಿರುಕಾಡು, ಮರ, ಪೊದೆ, ಹಾಗೂ ಬಿದಿರುಮೆಳೆಗಳ ನಡುವೆ ಕಾಣಬಹುದು. ಇವುಗಳು ಮರದ ರೆಂಬೆಗಳ ಕವಲುಗಳ ನಡುವೆ ಹುಲ್ಲು ನಾರುಗಳಿಂದ ಬಟ್ಟಲಿನಾಕಾರದ ಗೂಡು ಕಟ್ಟುತ್ತದೆ. ಅದರ ಹೊರ ಮೈಗೆ ಜೇಡರ ಬಲೆಯನ್ನು ಸುತ್ತಿ ಭದ್ರವಾದ ಗೂಡನ್ನು ಕಟ್ಟುತ್ತದೆ. ಫೆಬ್ರುವರಿಯಿಂದ ಜುಲೈ ಅವಧಿಯಲ್ಲಿ ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ 3ರಿಂದ 5 ತಿಳಿ ಗುಲಾಬಿ ಮೊಟ್ಟೆಗಳಿನ್ನಿಟ್ಟು, ಕಾವು ನೀಡಿ, ಮರಿಮಾಡುತ್ತದೆ.

ಅಂದಹಾಗೆ, ಬಾಲದಂಡೆಯ ಈ ಹಕ್ಕಿಯು ಮಧ್ಯಪ್ರದೇಶದ ರಾಜ್ಯಪಕ್ಷಿ. ಆ ಕಾರಣದಿಂದಲೇ ಅದನ್ನು ರಾಜ ಪಕ್ಷಿ ಎಂದೂ ಕರೆಯಲಾಗುತ್ತದೆ. ನಮ್ಮ ಬಂಡೀಪುರ, ನಂದಿಬೆಟ್ಟ, ಸಾವನ ದುರ್ಗ, ದೇವರಾಯನ ದುರ್ಗ, ಬನ್ನೇರುಘಟ್ಟ, ದಾಂಡೇಲಿ, ಹೊನ್ನಾವರ ಅರಣ್ಯ ಪ್ರದೇಶಗಳಲ್ಲೂ ಇವು ಕಂಡುಬರುತ್ತವೆ.

ಈ ಅಪರೂಪದ ಹಕ್ಕಿಗಳು ಈಚೆಗೆ ಹುಬ್ಬಳ್ಳಿಯಲ್ಲೂ ಕಾಣಸಿಕ್ಕವು. ಊರಿಗೆ ಬಂದಮೇಲೆ ಕ್ಯಾಮೆರಾಕ್ಕೆ ಸೆರೆ ಸಿಗದೆ ಇದ್ದಾವೆಯೇ? ಹಾಗೆ, ಸೆರೆ ಸಿಕ್ಕ ಕೆಲವು `ರಾಜ ಹಕ್ಕಿ~ಯ ಚಿತ್ರಗಳನ್ನು ನೋಡುತ್ತಾ ಹೋದರೆ, ಸವಕಳಿಯಾಗುತ್ತಿರುವ ಕಾಡು, ಬೆಳೆಯುತ್ತಿರುವ ಕಾಂಕ್ರೀಟ್ ಕಾಡುಗಳು, ಬತ್ತುತ್ತಿರುವ ಜೀವಸೆಲೆ- ಏನೆಲ್ಲ ಚಿತ್ರಗಳು ನೆನಪಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.