ಬಾಗಲಕೋಟೆ: ಜಿಲ್ಲೆಯ ಹಳ್ಳಿ, ಹಳ್ಳಿಗಳ ಓಣಿ, ಕೇರಿಯಲ್ಲಿ ಕಳೆದೊಂದು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯ್ತಿ ಚುನಾವಣೆಯ ಪೂರ್ಣ ಫಲಿತಾಂಶ ಶುಕ್ರವಾರ ರಾತ್ರಿ 11ಕ್ಕೆ ಪ್ರಕಟವಾಯಿತು.

ಫಲಿತಾಂಶ ಪ್ರಕಟವಾದ ಬಳಿಕ ಗ್ರಾಮಗಳಿಗೆ ತೆರಳಿದ ವಿಜೇತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ನಡುರಾತ್ರಿ ವರೆಗೂ ಹಳ್ಳಿಗಳಲ್ಲಿ ಪಟಾಕಿ ಸಿಡಿಸಿ, ಘೋಷಣೆ ಹಾಕಿ ವಿಜಯೋತ್ಸವ ಆಚರಿಸಿದರು. ಜಿಲ್ಲೆಯ 197 ಗ್ರಾಮ ಪಂಚಾಯ್ತಿಯ 2904 ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7554 ಅಭ್ಯರ್ಥಿಗಳ ಹಣೆಬರಹ ಕೊನೆಗೂ ಬಯಲಾಗುವ ಮೂಲಕ ಚುನಾವಣಾ ಪ್ರಕ್ರಿಯೆಗೆ ತೆರೆ ಬಿದ್ದಿತು.

ಜಿಲ್ಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ನಿಯೋಜಿಸಲಾಗಿದ್ದ ಒಟ್ಟು 1479 ಸಿಬ್ಬಂದಿ ರಾತ್ರಿ 11ರ ವರೆಗೂ ಮತ ಎಣಿಕೆ ನಡೆಸಿದರು. ಕೆಲ ಪಂಚಾಯ್ತಿ ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಸಮಾನ ಮತಗಳನ್ನು ಪಡೆದ ಕಾರಣ ಅಂತಹ ವಾರ್ಡ್ಗಳ ಮತವನ್ನು ಮರು ಎಣಿಕೆ ಮಾಡಿದ ಬಳಿಕ ಫಲಿತಾಂಶ ಪ್ರಕಟಿಸಲಾಯಿತು.

ಈ ಸಂಬಂಧ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರ ವರೆಗೆ 165 ಗ್ರಾಮ ಪಂಚಾಯ್ತಿಗಳ ಮತ ಎಣಿಕೆ ಏಕ ಕಾಲಕ್ಕೆ ಆರಂಭಿಸಲಾಯಿತು. ಮೊದಲ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಉಳಿದ 32 ಗ್ರಾ. ಪಂ.ಗಳ ಮತ ಎಣಿಕೆ ರಾತ್ರಿ 11ಕ್ಕೆ ಪೂರ್ಣಗೊಂಡಿತು ಎಂದರು.

ಸಣ್ಣ, ಪುಟ್ಟ ತಕರಾರುಗಳನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಯಾವುದೇ ವಿವಾದಗಳಾಗಲಿ, ಅಹಿತಕರ ಘಟನೆಗಳಾಗಲಿ ನಡೆದಿಲ್ಲ, ಮತ ಎಣಿಕೆ ಪ್ರಕ್ರಿಯೆ ಶಾಂತವಾಗಿ ನಡೆಯಿತು ಎಂದು ತಿಳಿಸಿದರು.

ಫಲಿತಾಂಶ ಪ್ರಕಟ: ಜಿಲ್ಲೆಯ 197 ಗ್ರಾಮ ಪಂಚಾಯ್ತಿಯ 2904 ಸದಸ್ಯ ಸ್ಥಾನಗಳ ಪೈಕಿ ರಾತ್ರಿ 9ಕ್ಕೆ ವರೆಗೆ 2873 ಸ್ಥಾನಗಳ ಫಲಿತಾಂಶ ಪ್ರಕಟವಾಯಿತು. ರಾತ್ರಿ 9ಕ್ಕೆ ಪ್ರಕಟವಾದ ತಾಲ್ಲೂಕುವಾರು ವಿವಿಧ ಗ್ರಾಮ ಪಂಚಾಯ್ತಿ ವಾರ್ಡ್ಗಳ ಫಲಿತಾಂಶ ಇಂತಿದೆ.

ಬಾಗಲಕೋಟೆ ತಾಲ್ಲೂಕಿನ 140 ವಾರ್ಡ್ಗಳಲ್ಲಿ 392, ಹುನಗುಂದ 479ರಲ್ಲಿ 472, ಬಾದಾಮಿ 544ರಲ್ಲಿ 537, ಜಮಖಂಡಿ 702ರಲ್ಲಿ 699, ಮುಧೋಳ 489ರಲ್ಲಿ 481ಮತ್ತು ಬೀಳಗಿ ತಾಲ್ಲೂಕಿನ 297ರಲ್ಲಿ 292 ವಾರ್ಡ್ಗಳ ಫಲಿತಾಂಶ ಪ್ರಕಟವಾಗಿದ್ದು, ರಾತ್ರಿ 11ರೊಳಗೆ ಎಲ್ಲ ವಾರ್ಡ್ಗಳ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ವಿಜೇತ ಅಭ್ಯರ್ಥಿಗಳು ಹಳ್ಳಿಗಳಲ್ಲಿ ತಡರಾತ್ರಿ ವರೆಗೂ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.