ಸೋಮವಾರ, ಮೇ 23, 2022
26 °C

ರಾಯಚೂರು ವಲಯ ತಂಡದ ಶಶಿಧರ್ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಶಿಧರ್ (111) ಗಳಿಸಿದ ಶತಕದ ನೆರವಿನಿಂದ ರಾಯಚೂರು ವಲಯ ತಂಡ ಇಲ್ಲಿ ನಡೆಯುತ್ತಿರುವ ಎಸ್.ಎ. ಶ್ರೀನಿವಾಸನ್ ಸ್ಮಾರಕ ಟ್ರೋಫಿ (25 ವರ್ಷದೊಳಗಿನವರು) ಕ್ರಿಕೆಟ್ ಟೂರ್ನಿಯ ಶಿವಮೊಗ್ಗ ವಲಯ ಎದುರಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.ಮಂಗಳವಾರ ಆರಂಭವಾದ ಎರಡು ದಿನಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಚೂರು ವಲಯ 63.6 ಓವರ್‌ಗಳಲ್ಲಿ 266 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಶಿವಮೊಗ್ಗ ವಲಯ ಮೊದಲ ದಿನದಾಟ ಅಂತ್ಯ ಕಂಡಾಗ 22 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಶಶಿಧರ್ 130 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 111 ರನ್ ಗಳಿಸಿದರು.ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ 63.3 ಓವರ್‌ಗಳಲ್ಲಿ 266. (ರಾಜ ಕುಮಾರ್ 93, ಶಶಿಧರ್ 111; ಕೆ. ಹೊಯ್ಸಳ 77ಕ್ಕೆ4, ವಿಕ್ರಮ್ ವೆಂಕಟೇಶ್ 54ಕ್ಕೆ6). ಶಿವಮೊಗ್ಗ ವಲಯ: 22 ಓವರ್‌ಗಳಲ್ಲಿ 3 ವಿಕೆಟ್‌ಗೆ 65. (ಎಸ್. ಸಯ್ಯದ್ ಬ್ಯಾಟಿಂಗ್ 29, ವಿಜಯ್ ಕುಮಾರ್ ಬ್ಯಾಟಿಂಗ್ 14; ಡಿ. ಅವಿನಾಶ್ 54ಕ್ಕೆ2).ಅಧ್ಯಕ್ಷರ ಇಲೆವೆನ್ 82.1 ಓವರ್‌ಗಳಲ್ಲಿ 6 ವಿಕೆಟ್‌ಗೆ 306. (ಕರುಣ್ ನಾಯರ್ 47, ವಿಜಯ ಕುಮಾರ್ 57, ಕ್ರಾಂತಿ ಕುಮಾರ್ 69, ಎಂ. ಡೇವಿಡ್ ಔಟಾಗದೆ 104; ರೌನುಕ್ ಶಹಾ 59ಕ್ಕೆ2, ಅಬ್ರಾರ್ ಖಾಜಿ 48ಕ್ಕೆ2). ಉಪಾಧ್ಯಕ್ಷರ ಇಲೆವೆನ್ ಎದುರಿನ ಪಂದ್ಯ.

ಬೆಂಗಳೂರು ವಲಯ ಇಲೆವೆನ್: 77.5 ಓವರ್‌ಗಳಲ್ಲಿ 249. (ಪವನ್ ದೇಶಪಾಂಡೆ 53, ಸೂರಜ್ ಸಂಪತ್ 31, ೀಶನ್ ಅಲಿ ಸಯ್ಯದ್ 31, ಯೂಸುಫ್ ಔಟಾಗದೆ 27; ದೈವಿಕ್ ವಿಶ್ವನಾಥ್ 58ಕ್ಕೆ3). ಕಾರ್ಯದರ್ಶಿ ಇಲೆವೆನ್: 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42. (ಅಭಿಷೇಕ್ ಬ್ಯಾಟಿಂಗ್ 28, ಕಯಾನ್ ಅಬ್ಬಾಸ್ ಬ್ಯಾಟಿಂಗ್ 13).ತುಮಕೂರು ವಲಯ: 55.5 ಓವರ್‌ಗಳಲ್ಲಿ 157 (ಶರತ್ 29, ಮನು ರವೀಂದ್ರ 29; ಕೆ. ಶಶೀಂದ್ರ 23ಕ್ಕೆ5). ಸಂಯುಕ್ತ ನಗರ ಇಲೆವೆನ್: 46 ಓವರ್‌ಗಳಲ್ಲಿ 1 ವಿಕೆಟ್‌ಗೆ 239. (ಲಿಯಾನ್ ಖಾನ್ ಬ್ಯಾಟಿಂಗ್ 117, ರಂಜನ್ ಸಂಜಯ್ ಕುಮಾರ್ ಬ್ಯಾಟಿಂಗ್ 109).

ಮೈಸೂರು ವಲಯ: 78 ಓವರ್‌ಗಳಲ್ಲಿ 6 ವಿಕೆಟ್‌ಗೆ 385. (ಎನ್. ಭರತ್ 136, ಎಂ.ಜಿ. ನವೀನ್ 50, ಪವನ್ ಗೋಖಲೆ 77ಕ್ಕೆ3). ಮಂಗಳೂರು ವಲಯ ವಿರುದ್ಧದ ಪಂದ್ಯ.ಧಾರವಾಡ ವಲಯ: 44 ಓವರ್‌ಗಳಲ್ಲಿ 154 (ಪರಪ್ಪ ಮೊರ್ಡಿ 59; ಐಜಿ ಅನಿಲ್ 43ಕ್ಕೆ6, ಸ್ಟಾಲಿನ್ ಹೂವರ್ 23ಕ್ಕೆ3). ಬೆಂಗಳೂರು ನಗರ ಇಲೆವೆನ್ 41 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 230. (ಎಸ್. ನಿರ್ಮಲ್ 83, ಆರ್. ಸಮರ್ಥ್ ಬ್ಯಾಟಿಂಗ್ 119).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.