ರಾಷ್ಟ್ರಪತಿ: ಪ್ರಣವ್ಗೆ ಜೆಡಿಎಸ್ ಬೆಂಬಲ
ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಜೆಡಿಎಸ್ ಬೆಂಬಲಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪ್ರಕಟಿಸಿದರು.
ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಪ್ರಣವ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡ ನಂತರ ಪ್ರಧಾನಿ ಸಿಂಗ್ ನನ್ನನ್ನು ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಿದರು. ಹಾಗೆಯೇ ಪ್ರಣವ್ ಅವರೂ ಮನವಿ ಮಾಡಿದ್ದಾರೆ~ ಎಂದರು.
ಎಲ್ಲವನ್ನೂ ತೆರೆದಿಡುವೆ: `50 ವರ್ಷಗಳ ನನ್ನ ರಾಜಕೀಯ ಜೀವನದ ಏಳು-ಬೀಳುಗಳನ್ನು ಪುಸ್ತಕದಲ್ಲಿ ದಾಖಲಿಸುತ್ತಿದ್ದೇನೆ. ಬಾಲ್ಯದ ಕುರಿತೂ ಪುಸ್ತಕದಲ್ಲಿ ಮಾಹಿತಿ ಇರಲಿದೆ. ಕುಮಾರಸ್ವಾಮಿ ಹಿಂದೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಸಂದರ್ಭ ಹೇಗಿತ್ತು ಎಂಬ ಬಗ್ಗೆ ಬರೆಯುತ್ತೇನೆ. ಪುಸ್ತಕ ಬರೆಯುವುದಕ್ಕಾಗಿ ಪ್ರತಿ ದಿನ ಒಂದು ಗಂಟೆ ಮೀಸಲಿಟ್ಟಿದ್ದೇನೆ~ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.