ತುಮಕೂರು: ಕರ್ನಾಟಕ ತಂಡದವರು ಇಲ್ಲಿ ನಡೆದ 25ನೇ ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.

ನಗರದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ಭಾನು ವಾರ ನಡೆದ ಅಂತಿಮ ಹಣಾಹಣಿ ಯ ಲ್ಲಿ ರಾಜ್ಯ ತಂಡ 11– 10 ಅಂಕ ಗ ಳಿಂದ ಮಹಾರಾಷ್ಟ್ರ ತಂಡವನ್ನು ಸೋ ಲಿಸಿ ಚಾಂಪಿಯನ್ ಪಟ್ಟ ಪಡೆಯಿತು.

ಕರ್ನಾಟಕ ತಂಡದ ಆಟಗಾರ ಬೆಳಗಾವಿಯ ಗಂಗಪ್ಪ 2 ನಿಮಿಷ ಮತ್ತು 3 ನಿಮಿಷ ಆಟವಾಡಿ 1 ಔಟ್ ಮಾಡಿ, ಪಂದ್ಯದ ಸರ್ವಶ್ರೇಷ್ಠ ಆಟಗಾರ (‘ಭರತ್ ಪ್ರಶಸ್ತಿ’) ಎನಿಸಿದರು.

ಶಶಾಂಕ್ 4 ನಿಮಿಷ ಆಟವಾಡಿ, ಉತ್ತಮ ಪ್ರದರ್ಶನ ನೀಡಿದರು. ಕಿರಣ್ಕುಮಾರ್ 1 ನಿಮಿಷ ಮತ್ತು 1.20 ನಿಮಿಷ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು.

ಆದರೆ ಕರ್ನಾಟಕ ಬಾಲಕಿಯರು ಫೈನಲ್ನಲ್ಲಿ ನಿರಾಸೆ ಅನುಭವಿಸಿದರು. 9–12 ಅಂಕಗಳಿಂದ ಮಹಾರಾಷ್ಟ್ರ ವಿರುದ್ಧ ಸೋಲು ಕಂಡರು.
ರಾಜ್ಯದ ಪಲ್ಲವಿ 2.30 ನಿಮಿಷ ಆಟವಾಡಿ 2 ಔಟ್ ಪಡೆದರು. ಚೈತ್ರಾ 2.10 ನಿಮಿಷ ಆಟವಾಡಿ 1 ಔಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.