ನವದೆಹಲಿ(ಪಿಟಿಐ): ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟಿಆರ್ಎಐ-ಟ್ರಾಯ್) ಮೊಬೈಲ್ ಫೋನ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಸಂಚಾರದ ವೇಳೆ ಮೊಬೈಲ್ ಫೋನ್ ಚಂದಾದಾರರು ಪಾವತಿಸುತ್ತಿದ್ದ `ರಾಷ್ಟ್ರೀಯ ರೋಮಿಂಗ್ ಶುಲ್ಕ'ದ ಗರಿಷ್ಠ ಮಿತಿಯನ್ನು ತಗ್ಗಿಸಿದೆ. ಈ ಕ್ರಮ ಜುಲೈನಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.ಆದರೆ, `ರಾಷ್ಟ್ರೀಯ ರೋಮಿಂಗ್ ಉಚಿತ' ಎಂಬ ಕೊಡುಗೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಶುಲ್ಕ ಇಳಿಕೆ ಪ್ರಮಾಣ
ಸ್ಥಳೀಯ ಸಂಖ್ಯೆಗಳಿಗೆ ಕರೆ ಮಾಡಿದರೆ ನಿಮಿಷಕ್ಕೆ ಗರಿಷ್ಠ ರೂ1.40 ಮತ್ತು (ರಾಷ್ಟ್ರೀಯ ರೋಮಿಂಗ್) ಎಸ್ಟಿಡಿ ಕರೆಗೆ ನಿಮಿಷಕ್ಕೆ ಗರಿಷ್ಠ ರೂ 2.40 ದರ ಎಂದು `ಟ್ರಾಯ್' 2007ರಲ್ಲಿ ಗರಿಷ್ಠ ಮಿತಿಯನ್ನು ನಿಗದಿಪಡಿಸಿತ್ತು. ಈಗ ಈ ಮಿತಿಯನ್ನು ಕ್ರಮವಾಗಿರೂ1 ಮತ್ತುರೂ1.50ಕ್ಕೆ ತಗ್ಗಿಸಲಾಗಿದೆ.

ಅಲ್ಲದೆ, ರೋಮಿಂಗ್ ವೇಳೆ ಕರೆ ಸ್ವೀಕರಿಸಿದರೆ (ಇನ್ಕಮಿಂಗ್ ಕಾಲ್) ವಿಧಿಸಲಾಗುತ್ತಿದ್ದ ಶುಲ್ಕದ ಗರಿಷ್ಠ ಮಿತಿಯನ್ನೂ ನಿಮಿಷಕ್ಕೆ ರೂ1.75ರಿಂದ 75 ಪೈಸೆಗೆ ತಗ್ಗಿಸಲಾಗಿದೆ.

ಗ್ರಾಹಕರಿಗೆ ಉಳಿತಾಯ
ಒಟ್ಟಾರೆ `ಟ್ರಾಯ್' ಕ್ರಮದಿಂದ ರಾಜ್ಯಗಳಾಚೆಗಿನ ಮೊಬೈಲ್ ಫೋನ್ಗಳಿಗೆ ಕರೆ ಮಾಡಿದರೆ ಅಥವಾ ಸ್ವೀಕರಿಸಿದರೆ ಹಾಗೂ ಚುಟುಕು ಸಂದೇಶ ಸೇವೆ(ಎಸ್ಎಂಎಸ್) ಬಳಸಿಕೊಂಡರೆ ಈವರೆಗೆ ನೀಡುತ್ತಿದ್ದ ರೋಮಿಂಗ್ ಶುಲ್ಕದಲ್ಲಿ ಗ್ರಾಹಕರಿಗೆ ಉಳಿತಾಯವಾಗಲಿದೆ. ರಾಷ್ಟ್ರೀಯ ವ್ಯಾಪ್ತಿಯ ಕರೆ ಮತ್ತು ಎಸ್ಎಂಎಸ್ ಅಗ್ಗವಾಗಲಿವೆ.

ಹೊಸ ದರಪಟ್ಟಿ ಅವಕಾಶ
ರಾಷ್ಟ್ರೀಯ ರೋಮಿಂಗ್ ಮತ್ತು ಎಸ್ಎಂಎಸ್ ಶುಲ್ಕದ ಗರಿಷ್ಠ ಮಿತಿಯನ್ನು ಈಗ ತಗ್ಗಿಸಲಾಗಿದೆ. ಇದು ದೂರಸಂಪರ್ಕ ಸೇವೆ ಒದಗಿಸುವ ಕಂಪೆನಿಗಳಿಗೆ ದರದಲ್ಲಿ ಇಳಿಕೆ ಮಾಡಲು ಅಥವಾ ಹೊಸ ದರಪಟ್ಟಿ ಪ್ರಕಟಿಸಲು ಅವಕಾಶ ಮಾಡಿಕೊಡಲಿದೆ ಎಂದು `ಟ್ರಾಯ್' ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.