ಮಂಗಳವಾರ, ಜನವರಿ 21, 2020
27 °C

ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಲೆ ಹಾಗೂ ವಿಜ್ಞಾನ ಜಗತ್ತಿನ ಎರಡು ಪ್ರಮುಖ ದೃಷ್ಟಿಕೋನಗಳು. ಕಲೆಯ ಮತ್ತು ವಿಜ್ಞಾನದ ದೃಷ್ಟಿಕೋನಗಳು ವಿಭಿನ್ನವಾಗಿದ್ದರೂ ಉದ್ದೇಶದಲ್ಲಿ ಒಂದೇ ಆಗಿರುತ್ತವೆ~ ಎಂದು ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ವಲಯ ನಿರ್ದೇಶಕ ಸುರೇಶ್ ಅನಗಳ್ಳಿ ಹೇಳಿದರು.ನಗರದಲ್ಲಿ ಗುರುವಾರ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯ ಆಯೋಜಿಸಿದ್ದ ದಕ್ಷಿಣ ಭಾರತ ವಿಜ್ಞಾನ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.`ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ನಾಟಕ ಪ್ರಕಾರವನ್ನು ಬಳಸಿಕೊಳ್ಳಬೇಕು. ವಿಜ್ಞಾನ ನಾಟಕ ಪ್ರಕಾರ ಶ್ರೀಮಂತಗೊಳ್ಳಲು ಸಾಧ್ಯವಿದೆ~ ಎಂದು ಅವರು ಅಭಿಪ್ರಾಯ ಪಟ್ಟರು.ಕರ್ನಾಟಕವೂ ಸೇರಿದಂತೆ, ಆಂದ್ರ ಪ್ರದೇಶ, ಕೇರಳ ಮತ್ತು ತಮಿಳುನಾಡಿನಿಂದ ಬಂದಿದ್ದ 7 ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ನಾಟಕಗಳನ್ನು ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)