ನವದೆಹಲಿ (ಪಿಟಿಐ): ಸಂಸದ ರಾಹುಲ್ ಗಾಂಧಿ 2009ರ ಚುನಾವಣಾ ಸಂದರ್ಭದಲ್ಲಿ ಆಸ್ತಿ ವಿವರ ಸಲ್ಲಿಸುವಾಗ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಚುನಾವಣಾ ಆಯೋಗವು ಅಮೇಥಿ ಕ್ಷೇತ್ರದ ಚುನಾವಣಾ ಅಧಿಕಾರಿಗೆ ಆದೇಶಿಸಿದೆ.

ರಾಷ್ಟ್ರೀಯ ದಿನಪತ್ರಿಕೆಯೊಂದರ (ಈಗ ನಿಂತು ಹೋಗಿದೆ) ಮೇಲೆ ಹೊಂದಿರುವ ಷೇರಿನ ವಿವರ ನೀಡಿಲ್ಲ ಹಾಗೂ ಆಯೋಗಕ್ಕೆ ರಾಹುಲ್ ಕೆಲವೊಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ವಾಮಿ ನ.15ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಗಣಿ ಮರು ಹಂಚಿಕೆ
ಕೋಲ್ಕತ್ತ (ಪಿಟಿಐ): ಎಂಟು ಕಲ್ಲಿದ್ದಲು ಗಣಿಗಳನ್ನು ಮರು ಹಂಚಿಕೆ ಮಾಡಲಾಗಿದೆ. ಅಂತರ ಸಚಿವಾಲಯ ಸಮಿತಿಯು ನಿರ್ಧಾರ ತೆಗೆದುಕೊಂಡ ಬಳಿಕ ಕಲ್ಲಿದ್ದಲು ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.
`ಒಂದೇ ಕಂಪೆನಿ ಅಥವಾ ಜಂಟಿಯಾಗಿ ನಡೆಸಲು ನೀಡಿದ್ದ 8 ಕಲ್ಲಿದ್ದಲು ಗಣಿಗಳ ಮರು ಹಂಚಿಕೆ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ~ ಎಂದು ಮೂಲಗಳು ತಿಳಿಸಿವೆ.

`ದ್ವೇಷ ಮರೆಯಬೇಕಾಗಿದೆ~
ನವದೆಹಲಿ (ಪಿಟಿಐ): ಉಭಯ ದೇಶಗಳು ದ್ವೇಷವನ್ನು ಮರೆಯಬೇಕಾಗಿದೆ ಎಂದು ಹೇಳಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, `ಸಂಘರ್ಷಕ್ಕೆ ಮೂಲ ಕಾರಣವಾಗಿರುವ ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು~ ಎಂದು ಶನಿವಾರ ಇಲ್ಲಿ ಹೇಳಿದ್ದಾರೆ.ಉಭಯ ದೇಶಗಳ ನಡುವಿನ ದೀರ್ಘ ಕಾಲದ ವಿವಾದಗಳು ಸಂಘರ್ಷಕ್ಕೆ ಕಾರಣವಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.