ಶನಿವಾರ, ಮೇ 28, 2022
25 °C

ರಾಹುಲ್ ವಿರುದ್ಧ ಆರೋಪ: ಮಾಜಿ ಶಾಸಕನಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಓರ್ವ ಯುವತಿ ಹಾಗೂ ಆಕೆಯ ಹೆತ್ತವರನ್ನು ಅಪಹರಿಸಿ ತನ್ನ ವಶದಲ್ಲಿರಿಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದ  ಸಮಾಜವಾದಿ ಪಕ್ಷದ ಮಾಜಿ ಶಾಸಕರೊಬ್ಬರಿಗೆ  ಅಲಹಾಬಾದ್ ಹೈಕೋರ್ಟ್ 50 ಲಕ್ಷ ರೂ ದಂಡ ವಿಧಿಸಿದೆ.ಇಷ್ಟೇ ಅಲ್ಲದೆ, ರಾಹುಲ್ ಗಾಂಧಿ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಿಶೋರ್ ಸಾಮ್ರಾಟ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಉಮಾನಾಥ ಸಿಂಗ್ ಮತ್ತು ಸತೀಶ್‌ಚಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ರಾಹುಲ್ ಗಾಂಧಿ ವಶದಲ್ಲಿರಿಸಿದ್ದಾರೆನ್ನಲಾದ ಯುವತಿ ಸುಕನ್ಯಾಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತಲ್ಲದೆ ವಿಚಾರಣೆಯ ವೇಳೆ ಆಕೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಳು.ಸುಕನ್ಯಾಳನ್ನು ಅಪಹರಿಸಲಾಗಿದೆ ಎಂದು ವರದಿ ಪ್ರಕಟಿಸಿದ ವೆಬ್‌ಸೈಟ್ ವಿರುದ್ಧ ತನಿಖೆ ನಡೆಸಲೂ ನ್ಯಾಯಾಲಯ ಇದೇ ವೇಳೆ ಆದೇಶ ನೀಡಿದೆ.ಸುಕನ್ಯಾಳ ಸಂಬಂಧಿ ಎಂದು ಹೇಳಿಕೊಂಡು ಗಜೇಂದ್ರ ಪಾಲ್ ಎಂಬುವವರು ಕೂಡ ರಾಹುಲ್ ಗಾಂಧಿ ವಿರುದ್ಧ ಇದೇ ಆರೋಪ ಹೊರಿಸಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಯುವತಿ ಹಾಗೂ ಆಕೆಯ ಹೆತ್ತವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.