ಮಂಗಳವಾರ, ಮೇ 24, 2022
31 °C

ರಿಪ್ಪನ್‌ಪೇಟೆ: ಕಾಟಾಚಾರದ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಪೂರ್ವಭಾವಿ ತಯಾರಿ ಇಲ್ಲದೇ ಪಂಚಾಯ್ತಿ ಸದಸ್ಯರಿಗೂ ತಿಳಿವಳಿಕೆ ನೀಡದೇ ಕೇವಲ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರೇ  ಫೋಟೊ ಇಟ್ಟು ವಾಲ್ಮೀಕಿ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ಅಚರಣೆ ಮಾಡಿದರು.ಗಾಳಿ-ಮಳೆಗೆ ಹಾನಿ

ಎರಡು ದಿನಗಳಿಂದ ಸಂಜೆವೇಳೆ ಗುಡುಗು ಸಿಡಿಲಿನ ಅರ್ಭಟದಿಂದ ಸುರಿದ ಗಾಳಿ- ಮಳೆಗೆ ಕೆಲವೆಡೆ ಮನೆಯ ಹೆಂಚುಗಳು ಹಾರಿ ಹೋಗಿವೆ ಹಾಗೂ ವಿದ್ಯುತ್ ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ.ರಸ್ತೆ ಪಕ್ಕದಲ್ಲಿ ಹೊಸ ಮಣ್ಣು ಹಾಕಿದ ಪರಿಣಾಮ ಸೂಡೂರು ಗೇಟ್‌ಬಳಿ ಖಾಸಗಿ ಬಸ್ಸೊಂದು ವಾಹನ ಹಿಂದಿಕ್ಕುವ ಬರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದ ಧರೆಗೆ ಸರಿದಿತ್ತು.ಹಿರೇಜೇನಿಯಲ್ಲಿ ಸುಲೋಕ ಕುಮಾರ್ ಎಂಬುವವರ ಮನೆ ಮುಂದಿನ ತೆಂಗಿನ ಮರವೊಂದು ಗಾಳಿಗೆ ಉರುಳಿ ಮನೆ ಮೇಲೆ ಬಿದ್ದು, ಸುಮಾರು ್ಙ 10 ಸಾವಿರ ನಷ್ಟವಾಗಿದೆ.ಕಳೆದ 15 ದಿನಗಳಿಂದ ಮಳೆ ಇಲ್ಲದೇ ಬಿರುಕು ಬಿಟ್ಟ ಭೂ-ತಾಯಿಯ ಒಡಲ ನೋಡಿ ಕಂಗಾಲಾಗಿದ್ದ ರೈತರಿಗೆ ಈ ಮಳೆ ಜೀವದಾನ ನೀಡಿದೆ. ಭೂಮಿ ಹುಣ್ಣಿಮೆ

ಬಸಿರುಹೊತ್ತ ಭೂ ತಾಯಿಯ ಮಡಿಲು ತುಂಬುವ ಹಬ್ಬವಾದ ಭೂ ಹುಣ್ಣಿಮೆ ಆಚರಣೆ ಮಂಗಳವಾರ ನಡೆಯಿತು.ಒಬ್ಬಟ್ಟು, ಕರಿಗಡಬು, ತರಹೇವಾರಿ ಕಾಯಿಪಲ್ಲೆ, ಕೊಟ್ಟೆಕಡುಬು ಹಾಗೂ ಅಚ್ಚಂಬಲಿ (ತಳುಬಾನ ) ಮುಂಜಾನೆ ಕಾಗೆ ಹೊರ ಹೋಗುವ ಮುನ್ನ ಕಳಸ , ಬೂಮಣ್ಣಿ-ಕುಕ್ಕೆ ಹೊತ್ತಿಕೊಂಡು ಹೋಗಿ ರೈತರು ಚರಗ ಬೀಸುವ ಮುನ್ನ `ಅಚ್ಚಂಬಲಿ - ಅಳಿಯಂಬ್ಲಿ ಮುಚ್ಚೆತಿನ್ನು ಭೂಮಿತಾಯಿ ಬಾ~ ಎಂದು ಹೇಳುತ್ತಾ ಹಬ್ಬದ ಊಟ ಉಣ ಬಡಿಸಿ ನಂತರ ತಾವೂ ಕುಳಿತು ಸಹ ಭೋಜನ ಸವಿದು ಹೊರಬರುವ ನೋಟ ಸೊಗಸಾಗಿತ್ತು.ಪ್ರತಿಭಟನೆ

ಹೊಳೆಹೊನ್ನೂರು: ಪಟ್ಟಣದ ನೃಪತುಂಗ ಸರ್ಕಲ್‌ನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಮಂಗಳವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿತು.ಪ್ರತಿಭಟನೆ ನೇತೃತ್ವವನ್ನು ಬಿಜೆಪಿ ಹಿರಿಯ ಮುಖಂಡ ರಂಗಪ್ಪ,ಮಾಜಿ ಗ್ರಾ.ಪಂ. ಅಧ್ಯಕ್ಷ ಸಿದ್ದಪ್ಪ, ಸಾವಯವ ಕೃಷಿಯ ಭದ್ರಾವತಿತಾಲ್ಲೂಕು ಕಾರ್ಯದರ್ಶಿ ರಾಮಕೃಷ್ಣ ಮೇಸ್ತ, ಶ್ರೀನಿವಾಸ್, ಕಲ್ಲಜ್ಜನಾಳ್ ಮಂಜುನಾಥ್, ಲೋಕೇಶ್, ಹಾಲಸ್ವಾಮಿ, ಶಿವಾಜಿರಾವ್ ಮತ್ತಿತರರು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.