ಸೋಮವಾರ, ಏಪ್ರಿಲ್ 19, 2021
33 °C

ರಿಲೇನಲ್ಲಿ ಪಾಲ್ಗೊಳ್ಳುವುದಿಲ್ಲ: ಪೊವೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ):  ಹಿಂದೆ ವಿಶ್ವ ದಾಖಲೆ ಸಾಧನೆ ಮಾಡಿದ್ದ ಜಮೈಕಾದ ಅಸಾಫಾ ಪೊವೆಲ್ ಲಂಡನ್ ಒಲಿಂಪಿಕ್ಸ್‌ನ 4X100 ಮೀಟರ್ ರಿಲೇಯಲ್ಲಿ ಕೂಡ ಓಡುವುದಿಲ್ಲ. ಪುರುಷರ 100 ಮೀಟರ್‌ನಲ್ಲಿ ಓಡುವಾಗ ಅವರು ಸ್ನಾಯು ಸೆಳೆತದಿಂದ ಬಳಲಿದ್ದರು.

ಈ ಕಾರಣ ಅವರು ಈ ಋತುವಿನಲ್ಲಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. 29 ವರ್ಷ ವಯಸ್ಸಿನ ಪೊವೆಲ್ 100 ಮೀ. ಓಟದಲ್ಲಿ ಕೊನೆಯವರಾಗಿ ಗುರಿ ತಲುಪಿದ್ದರು.

`ನನ್ನ ಅನುಪಸ್ಥಿತಿಯಲ್ಲೂ ಜಮೈಕಾ 4X100 ಮೀಟರ್ ರಿಲೇಯಲ್ಲಿ ಉತ್ತಮ ಪ್ರದರ್ಶನ ತೋರಲಿದೆ. ಆ ವಿಶ್ವಾಸ ನನ್ನಲ್ಲಿದೆ. ಎಲ್ಲರೂ ಸೇರಿ ಪ್ರೋತ್ಸಾಹ ತುಂಬೋಣ~ ಎಂದು ಪೊವೆಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.

4X100 ಮೀಟರ್ ರಿಲೇಯಲ್ಲಿ ಜಮೈಕಾ ತಂಡ 2008ರ ಒಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿತ್ತು. 100 ಮೀ. ಚಾಂಪಿಯನ್ ಉಸೇನ್ ಬೋಲ್ಟ್ ಕೂಡ ಈ ವಿಭಾಗದಲ್ಲಿ ಓಡಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.