ನವದೆಹಲಿ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿರುವುದರಿಂದ ರಫ್ತುದಾರರಿಗೆ ಅನಿರೀಕ್ಷಿತವಾಗಿ ಹೆಚ್ಚುವರಿ ಲಾಭ ಲಭಿಸುತ್ತಿದೆ. ಆದರೆ, ಮತ್ತೊಂದೆಡೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ತಮಗೆ ಹೆಚ್ಚಿನ ರಿಯಾಯಿತಿ ನೀಡಬೇಕು ಎಂದು ಆಮದುದಾರರು ಒತ್ತಡ ಹೇರುತ್ತಿದ್ದಾರೆ.

ದೇಶದಿಂದ ರಫ್ತಾಗುವ ಸರಕುಗಳ ಮೇಲೆ ಶೇ 10ರಿಂದ ಶೇ 15ರಷ್ಟು ರಿಯಾಯಿತಿ ನೀಡಬೇಕು ಎನ್ನುವ ಒತ್ತಡ ಸಾಗರೋತ್ತರ ಮಾರುಕಟ್ಟೆಗಳಿಂದ ಹೆಚ್ಚಿದೆ ಎಂದು `ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ~(ಎಫ್ಐಇಒ)ದ ಮಹಾ ನಿರ್ದೇಶಕ ಅಜಯ್ ಸಾಹಿ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರ ಸಾರ್ವಕಾಲಿಕ ದಾಖಲೆ ಮಟ್ಟ ರೂ57.30ಕ್ಕೆ ಕುಸಿತ ಕಂಡಿದೆ. ಈ ಏರಿಳಿತವು ವಹಿವಾಟಿನಲ್ಲಿ ತೀವ್ರ ಅಸ್ಥಿರತೆ ಸೃಷ್ಟಿಸಿದೆ. ಈಗಾಗಲೇ ಎಂಜಿನಿಯರಿಂಗ್ ಸರಕುಗಳ ರಫ್ತಿನ ಮೇಲೆ ರಿಯಾಯಿತಿ ನೀಡಲಾಗಿದೆ. ಆದರೂ, ಒತ್ತಡ ತಂತ್ರ ಹೆಚ್ಚುತ್ತಿದೆ ಎಂದು ಕೇಂದ್ರ ರಫ್ತು ಉತ್ತೇಜನ ಮಂಡಳಿ ನಿರ್ದೇಶಕ ಸುರಂಜನ್ ಗುಪ್ತಾ ಹೇಳಿದ್ದಾರೆ.

`ಯೂರೂ~ಗೂ ಕಷ್ಟಕಾಲ
ಅತ್ತ ಅಂತರರಾಷ್ಟ್ರೀಯ ವಿನಿಮಯ ಮಾರುಕಟ್ಟೆಯಲ್ಲಿ `ಯೂರೊ~ ಸಹ ಡಾಲರ್ ಎದುರು ಮಂಕಾಗುತ್ತಿದೆ. ಸ್ಪೇನ್ನ 15 ದೊಡ್ಡ ಬ್ಯಾಂಕ್ಗಳಿಗೆ ರೇಟಿಂಗ್ ಸಂಸ್ಥೆ `ಮೂಡಿ~ ಕಡಿಮೆ ಶ್ರೇಣಿ ನೀಡಿರುವುದು `ಯೂರೊ~ ಅಪಮೌಲ್ಯಕ್ಕೆ ಕಾರಣವಾಗಿದೆ. ಡಾಲರ್ ಎದುರು ಯೂರೊ ಮೌಲ್ಯ ಗುರುವಾರವೂ ಶೇ 1.25ರಷ್ಟು ಕಡಿಮೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.