ವಿಜಾಪುರ: ತಾಲ್ಲೂಕಿನ ಹೊಸೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತ ಎರಡು ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಶರಣಪ್ಪ ಬಸಪ್ಪ ಕನ್ನೂರ ಎಂಬಾತ ಈ ಹಿಂದೆ ಇಲ್ಲಿ ಕೆಲಸ ಮಾಡುವಾಗ ಗೌಡಪ್ಪ ಕಲ್ಲಪ್ಪ ಜನವಾಡ ಅವರು ತಮ್ಮ ಖಾತೆಗೆ ಜಮೆ ಮಾಡಲು ಕೊಟ್ಟಿದ್ದ 2 ಲಕ್ಷ ರೂಪಾಯಿ ಹಣವನ್ನು ಸಂಘಕ್ಕೆ ಸಂದಾಯ ಮಾಡದೆ ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾನೆ ಎಂದು ಸಿದಗಿರಿ ರಾಮಗೊಂಡ ನ್ಯಾಮಗೌಡ ಎಂಬವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ
ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದ ಶೋಭಾ ಸಂಗಮೇಶ ಹಟ್ಟಿ (21) ಎಂಬ ವಿವಾಹಿತೆ ತೋಟದ ಮನೆಯಿಂದ ಹೊರಗೆ ಹೋದವಳು ಮರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಕನಾಳದಲ್ಲಿ ಕಳ್ಳತನ
ಬಸವನ ಬಾಗೇವಾಡಿ ತಾಲ್ಲೂಕಿನ ಸಂಕನಾಳ ಗ್ರಾಮದಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ. ಹಣಮೇಶ ಶಂಕರೆಪ್ಪ ಚಲವಾದಿ ಅವರ ಮನೆಯಲ್ಲಿದ್ದ 62 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಆಭರಣ ಹಾಗೂ ಯಮನಪ್ಪ ಕಾಣಿ ಅವರ ಮನೆಯಲ್ಲಿದ್ದ 800 ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುವನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಬಾಲಕ ಸಾವು
ವಿಜಾಪುರದ ಸಿಂದಗಿ ರಸ್ತೆಯಲ್ಲಿ ಬುಧವಾರ ಖಾಸಗಿ ಬಸ್ ಹಾಯ್ದು ಗಾಯಗೊಂಡಿದ್ದ ಕುಮಾರ ರಾಘವೇಂದ್ರ ಕುಮಠೆ ಎಂಬ ಐದು ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಾಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕೊಲೆ
ವಿಜಾಪುರ: ವ್ಯಕ್ತಿಯೊಬ್ಬ ತಮ್ಮ ಹೊಲ ಮಾರಿ ಬಂದ ಹಣದಲ್ಲಿ ತಂದೆಗೆ ಪಾಲು ಕೊಡಿಸಿದವನನ್ನೇ ಕೊಲೆ ಮಾಡಿದ ಘಟನೆ ಇಲ್ಲಿ ನಡೆದಿದೆ. ಸುರೇಶ ಅಲಿಯಾಸ ಸುರೇಬಾ ಲಕ್ಷ್ಮಣ ಗೋಪನೆ (60) ಕೊಲೆಯಾದ ವ್ಯಕ್ತಿ. ತಾಲ್ಲೂಕಿನ ಸಿದ್ದಾಪೂರ ಮಾನೆನ ದೊಡ್ಡಿಯ ಮಾಧು ಅಂಬು ಮಾನೆ ಎಂಬಾತ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಧು ತನ್ನ ಜಮೀನನ್ನು ಮಾರಾಟ ಮಾಡಿದ್ದ. ಸುರೇಶನು ಈ ಹಣದಲ್ಲಿ ಸ್ವಲ್ಪ ಭಾಗವನ್ನು ಆರೋಪಿಯ ತಂದೆಗೆ ಕೊಡಿಸಿದ್ದ. ತನ್ನ ತಂದೆಗೆ ಏಕೆ ಹಣ ಕೊಡಿಸಿದೆ ಎಂದು ಸಿಟ್ಟಾಗಿ ಕಟ್ಟಿಗೆಯಿಂದ ಹೊಡೆದು ಸುರೇಶನನ್ನು ಕೊಲೆ ಮಾಡಿದ್ದಾನೆ. ತನಗೂ ಹೊಡೆದು ಗಾಯಗೊಳಿಸಿದ್ದಾನೆ ಎಂದು ಸುರೇಶನ ಪುತ್ರ ಸದು ಅಲಿಯಾಸ ಸದಾಶಿವ ದೂರು ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಇಲ್ಲಿಯ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕ ನಾಪತ್ತೆ
ಕೊಲ್ಹಾರ: ಕವಲಗಿ ಗ್ರಾಮದ ಶಿವಾನಂದ ರಂಗಪ್ಪ ಪೂಜಾರಿ ಎಂಬ 11 ವರ್ಷದ ಬಾಲಕ ಕಳೆದ 15 ದಿನಗಳಿಂದ ಕಾಣೆಯಾಗಿದ್ದಾನೆ. ಈ ಕುರಿತು ಆತನ ತಂದೆ ರಂಗಪ್ಪ ಶಿವಪ್ಪ ಪೂಜಾರಿ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

11 ವರ್ಷದ ಬಾಲಕ ಶಿವಾನಂದ ಮೂರು ಅಡಿ ಐದು ಅಂಗುಲ ಎತ್ತರದವನಾಗಿದ್ದು, ಸಾದಗಪ್ಪು ಬಣ್ಣ ಹೊಂದಿದ್ದಾನೆ. ದುಂಡುಮುಖದವನಿದ್ದು, ಮನೆಯಿಂದ ಹೋಗುವಾಗ ಬಿಳಿಯ ಬಣ್ಣದ ಅಂಗಿ, ಚಡ್ಡಿ ಧರಿಸಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕ ಪತ್ತೆಯಾದಲ್ಲಿ ಕೊಲ್ಹಾರ ಪೊಲೀಸ್ ಠಾಣೆ 08426-283013, ಇಲ್ಲವೇ ವಿಜಾಪುರ ಕಂಟ್ರೋಲ್ ರೂಮ್ 08352-250844 ಗೆ ತಿಳಿಸಲು ಪಿಎಸ್ಐ ಎಸ್.ಬಿ. ಮಾಳಗೊಂಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.