ಬುಧವಾರ, ಮೇ 25, 2022
22 °C

ರೂ 30000 ಗಡಿ ದಾಟಿದ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ(ಪಿಟಿಐ): ಕೆಲವು ತಿಂಗಳಿಂದ ಸತತ ಏರುಮುಖವಾಗಿಯೇ ಇರುವ ಚಿನ್ನದ ದರ, ಶನಿವಾರವೂ ದೇಶದ ವಿವಿಧೆಡೆಯ ಚಿನಿವಾರ ಪೇಟೆಗಳಲ್ಲಿ ರೂ 30,000ದ ಗಡಿ ದಾಟಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು.ಚೆನ್ನೈನಲ್ಲಿ ರೂ1095ರಷ್ಟು ಗರಿಷ್ಠ ಏರಿಕೆ ಕಂಡ ಸ್ಟಾಂಡರ್ಡ್ ಚಿನ್ನ 10 ಗ್ರಾಂಗೆ ರೂ30380ಕ್ಕೆ ಮುಟ್ಟಿದೆ. ನವದೆಹಲಿಯಲ್ಲಿ ರೂ960ರಷ್ಟು ದರ ಹೆಚ್ಚಿದ್ದು, ರೂ30300ಕ್ಕೆ ಮುಟ್ಟಿದೆ. ಕೊಲ್ಕತ್ತಾದಲ್ಲಿ ರೂ785ರಷ್ಟು ಏರಿಕೆ ಕಂಡು ರೂ30245ಕ್ಕೇರಿದೆ. ಮುಂಬೈನಲ್ಲಿ ರೂ 890ರಷ್ಟು ಹೆಚ್ಚಿ ರೂ 29895ರಲ್ಲಿ ದಿನದಂತ್ಯ ಕಂಡಿದೆ.ನ್ಯೂಯಾರ್ಕ್ ಪೇಟೆಯಲ್ಲಿ ಬಂಗಾರದ ಬೆಲೆ ದಿಢೀರ್ ಏರಿದ್ದು, ರೂಪಾಯಿ ಮೌಲ್ಯದ ಸತತ ಕುಸಿತ ಇಲ್ಲಿನ ದರ ಏರಿಕೆಗೆ ಕಾರಣ ಎಂಬುದು ಚಿನಿವಾರ ಪೇಟೆ ಪ್ರತಿಕ್ರಿಯೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.