ಗುರುವಾರ , ಏಪ್ರಿಲ್ 22, 2021
27 °C

ರೂ 45 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ಹುಣಸಗಿ ಪಟ್ಟಣದಲ್ಲಿ 20 ಕೋಟಿ ಠೇವಣಿಯನ್ನು ಹೊಂದಿ 31 ಕೋಟಿ ವ್ಯವಹಾರಗಳನ್ನು ಮಾಡುತ್ತಾ ಅತ್ಯಂತ ಜನರ ವಿಶ್ವಾಸಗಳಿಸಿರುವ ಬ್ಯಾಂಕ್‌ ಎಂದರೆ ಅದುವೇ ಕರ್ಣಾಟಕ ಬ್ಯಾಂಕ್‌ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೆಶಕ ಪಿ.ಜಯರಾಮ ಭಟ್‌ ನುಡಿದರು.ಹುಣಸಗಿಯಲ್ಲಿ ಕರ್ಣಾಟಕ ಬ್ಯಾಂಕ್‌ನ ನೂತನ ಕಟ್ಟಡದ ಸ್ಥಳಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.1924ರಲ್ಲಿ ಕೇವಲ 5824 ರೂಪಾಯಿ ಹಣದೊಂದಿಗೆ ಪ್ರಾರಂಭವಾದ ಈ ಬ್ಯಾಂಕ್‌, ಇಂದು 45000 ಕೋಟಿಗೂ ಮಿಕ್ಕಿ ದಾಖಲೆ ವ್ಯವಹಾರ ವನ್ನು ಮಾಡುತ್ತಿರುವ ಅತಿದೊಡ್ಡ ಬ್ಯಾಂಕ್‌ ಇದಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶೇರುದಾರ ರನ್ನು ಹೋಂದಿರುವ ಜನಪರ ಬ್ಯಾಂಕ್‌ ಇದಾಗಿದೆ ಎಂದು ಬ್ಯಾಂಕ್‌ ಕುರಿತು ವಿವರಿಸಿದರು.ಈ ನೂತನ ಕಟ್ಟಡದಲ್ಲಿ ಸೇಫ್‌ ಲಾಕರ್‌ ಸೌಲಭ್ಯ ಕೂಡಾ ಒದಗಿಸಲಾ ಗಿದ್ದು ಗ್ರಾಹಕರು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ಲಿಂಗ ಸೂಗೂರು ಶಾಸಕ ಮಾನಪ್ಪ ವಜ್ಜಲ ಉದ್ಘಾಟಿಸಿ ಮಾತನಾಡಿದರು.ಶೀಘ್ರ ಎ.ಟಿ.ಎಂ: ಹುಣಸಗಿಯಲ್ಲಿ ಅತ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದರಿಂದ ಇಲ್ಲಿ ಎಟಿಎಂ ಅವಶ್ಯ ವಿರುವುದರಿಂದ ಶೀಘ್ರದಲ್ಲಿ ಎಟಿಎಂ ಪ್ರಾರಂಭಿಸುವುದಾಗಿ ಭರವಸೆ ನೀಡಿ ದರು. ಎ.ಜಿ.ಎಂ ಎಚ್‌.ಎಸ್‌. ರುದ್ರಯ್ಯ ಹುಣಸಗಿ ಬ್ಯಾಂಕ್‌ ಮ್ಯಾನೇಜರ್‌ ಪಿ.ಜಿ ಜಹಗಿರದಾರ ವೇದಿಕೆ ಮೇಲೆ ಇದ್ದರು.ಬ್ಯಾಂಕ್‌ ಗ್ರಾಹಕರಾದ ನಿಂಗಣ್ಣ.ಎಂ. ಬಳಿ, ಬಸವರಾಜ, ಶಿವನಗೌಡ ಪಾಟೀಲ, ಶಾಂತಗೌಡ ಪಾಟೀಲ, ಸಿದ್ದಣ್ಣ, ರಾಚಯ್ಯಸ್ವಾಮಿ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.