ಬುಧವಾರ, ಜೂನ್ 23, 2021
30 °C
ಬೇಲೆಕೇರಿ ಅಕ್ರಮ ಅದಿರು ಸಾಗಣೆ

ರೆಡ್ಡಿಗೆ ಜಾಮೀನು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ಕಳ್ಳ­ಸಾಗಣೆ ಮಾಡಿರುವ ಆರೋಪ ಎದುರಿ­ಸು-­ತ್ತಿರುವ ಯಲ್ಲಾಪುರದ ಶಾಸಕ ಕೆ.ಶಿವರಾಮ್‌ ಹೆಬ್ಬಾರ್‌ ಅವರ ಪುತ್ರ ವಿವೇಕ್ ಹೆಬ್ಬಾರ್, ಅವರ ನಿಕಟವರ್ತಿ ಪ್ರಕಾಶ್ ಹೆಗಡೆ, ಹೊಸಪೇಟೆಯ ಕೆ.ಜನಾರ್ದನ ರೆಡ್ಡಿ ಮತ್ತು ಐ.ಎರ್ರಿಸ್ವಾಮಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರವಿ ಎಂ. ನಾಯಕ್‌ ತಿರಸ್ಕರಿಸಿ, ಆದೇಶ ಹೊರಡಿಸಿದ್ದಾರೆ. ಎಲ್ಲ ಆರೋಪಿಗಳೂ ಈ ಪ್ರಕರಣದಲ್ಲಿ ನೇರವಾಗಿ ಭಾಗಿ­ಯಾಗಿದ್ದಾರೆ. ಅವರಿಗೆ ತಿಳಿಯ­ದೆಯೇ ತಪ್ಪು ನಡೆದಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.