ಸೋಮವಾರ, ಜೂನ್ 21, 2021
23 °C

ರೆಡ್ಡಿ ಅರ್ಜಿ ವಜಾಕ್ಕೆ ಕೋರಿ ಹೈಕೋರ್ಟ್‌ಗೆ ಸಿಬಿಐ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಕೋರ್ಟ್‌ಗೆ ಸಿಬಿಐ ಬುಧವಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿದೆ.ಹೆಚ್ಚಿನ ತನಿಖೆಗಾಗಿ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡುವಂತೆ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ.ಮಾರ್ಚ್ 12ರವರೆಗೆ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್ ಆದೇಶಿಸಿತ್ತು. ಬಂಧನದ ಅವಧಿ ಈಗಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಈ ಮನವಿಗೆ ಮಾನ್ಯತೆ ಇಲ್ಲ ಎಂದು ಸಿಬಿಐ ತಿಳಿಸಿದೆ.ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 269 (ಸಿ) ಕಲಮಿನ ಅನ್ವಯ ಮಾರ್ಚ್ 7ರ ನಂತರ ತಮ್ಮನ್ನು ಪೊಲೀಸರ ವಶಕ್ಕೆ ನೀಡುವಂತಿಲ್ಲ. ಆದರೂ 12ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ತಾವು ಆಕ್ಷೇಪಣೆ ಸಲ್ಲಿಸಿದರೂ ಅದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ರೆಡ್ಡಿ ವಾದ.ಅದನ್ನು ಸಿಬಿಐ ಅಲ್ಲಗಳೆದಿದೆ. ವಿಚಾರಣೆ ನಡೆಸುವ ಸಂಬಂಧ ಯಾರನ್ನೇ ಆದರೂ ಪೊಲೀಸರ ವಶಕ್ಕೆ ಒಪ್ಪಿಸುವ ಅಧಿಕಾರ ತಮಗೆ ಇದೆ ಎಂದು ಅದು ತಿಳಿಸಿದೆ.ಇದೇ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸಿರುವಾಗ ಕರ್ನಾಟಕದ ಪೊಲೀಸರಿಗೆ ಆ ಅಧಿಕಾರ ಇಲ್ಲ ಎಂಬ ರೆಡ್ಡಿ ವಾದಕ್ಕೂ ಸಿಬಿಐ ಆಕ್ಷೇಪಣೆ ಎತ್ತಿದೆ.`ಆರೋಪ ಒಂದೇ ಆಗಿದ್ದರೂ ಸಂಬಂಧಿತ ರಾಜ್ಯಗಳ ಪೊಲೀಸರು ಆ ಪ್ರಕರಣದ ವಿಚಾರಣೆ ನಡೆಸಬಹುದಾಗಿದೆ. ರೆಡ್ಡಿ ಅವರು ಅರ್ಜಿಯಲ್ಲಿ ಮಾಡಿರುವ ವಾದಗಳಿಗೆ ಯಾವುದೇ ಹುರುಳು ಇಲ್ಲ.ಆದುದರಿಂದ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ಅದು ಕೋರಿದೆ. ನ್ಯಾಯಮೂರ್ತಿ ಎನ್.ಆನಂದ ವಿಚಾರಣೆ ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.