ಶುಕ್ರವಾರ, ಆಗಸ್ಟ್ 7, 2020
25 °C

ರೆನೊದಿಂದ ಅದ್ದೂರಿ ಡಸ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆನೊದಿಂದ ಅದ್ದೂರಿ ಡಸ್ಟರ್

ಬೆಂಗಳೂರು: ಮುಂದಿನ ದೀಪಾವಳಿ ಹಬ್ಬಕ್ಕೂ ಮುನ್ನ `ಹೊಸ ಸೆಡಾನ್~ ಕಾರು ಬಿಡುಗಡೆ ಮಾಡಲು ಫ್ರಾನ್ಸ್ ಮೂಲದ ವಾಹನ ಉದ್ಯಮ ಕಂಪೆನಿ `ರೆನೊ~ ಹೇಳಿದೆ.ನಗರದಲ್ಲಿ ಗುರುವಾರ ಹೊಸ ಕಾರು `ಡಸ್ಟರ್~ ಕಾರು ಬಿಡುಗಡೆ ಮಾಡಿ ಮಾತನಾಡಿದ `ರೆನೊ ಇಂಡಿಯ~ ಕಂಪೆನಿಯ ಮಾರಾಟ-ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಲೆನ್ ಕುರನ್, ಈ ವಿಷಯ ತಿಳಿಸಿದರು.2005ರಲ್ಲಿ ಕಾರ್ಯಾರಂಭ ಮಾಡಿದ `ರೆನೊ ಇಂಡಿಯ ಪ್ರೈ.ಲಿ~, ಸದ್ಯ 4 ಅದ್ದೂರಿ ಕಾರುಗಳನ್ನು ಭಾರತದ ರಸ್ತೆಗಿಳಿಸಿದೆ. ಚೆನ್ನೈನಲ್ಲಿ ತಯಾರಿಕಾ ಘಟಕವಿದ್ದು, ವಾರ್ಷಿಕ 4 ಲಕ್ಷ ಕಾರು ತಯಾರಿಸಲಾಗುತ್ತಿದೆ. ದೇಶದಾದ್ಯಂತ 55 ಮಾರಾಟ ಕೇಂದ್ರಗಳಿದ್ದು, ವರ್ಷಾಂತ್ಯದೊಳಗೆ 100ಕ್ಕೆ ಹೆಚ್ಚಿಸಲಾಗುವುದು ಎಂದು ವಿವರಿಸಿದರು.ನಂತರ ಮಾತನಾಡಿದ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್ ಬಾಲಸುಬ್ರಹ್ಮಣ್ಯಂ, ಭಾರತದಲ್ಲಿ ಎಸ್‌ಯುವಿ, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿ ಕಾರು ಬಯಸುವ ಭಿನ್ನ ವರ್ಗಗಳೇ ಇವೆ. ರೆನೊದ `ಡಸ್ಟರ್~ ಕಾರು ಈ ಮೂರೂ ಮಾದರಿಯ ಸೌಲಭ್ಯಗಳನ್ನೂ ಒಳಗೊಂಡಿರುವುದರಿಂದ ಎಲ್ಲವರ್ಗದವರಿಗೂ ಪ್ರಿಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಡಸ್ಟರ್~ ಡೀಸೆಲ್ ಆರ್‌ಎಕ್ಸ್‌ಇ ಪೆಟ್ರೋಲ್ ಕಾರು ರೂ 7.19 ಲಕ್ಷದಿಂದ ರೂ8.21 ಲಕ್ಷದವರೆಗೂ ಇದೆ. ಡೀಸೆಲ್ ಎಂಜಿನ್‌ನ ಆರ್‌ಇಎಕ್ಸ್ ಮಾದರಿ ರೂ8 ಲಕ್ಷದಿಂದ ರೂ10 ಲಕ್ಷ, ಆರ್‌ಎಕ್ಸ್‌ಎಲ್ ಮಾದರಿ ರೂ10 ಲಕ್ಷದಿಂದ ರೂ11.35 ಲಕ್ಷದವರೆಗೂ ಇದೆ. ಸ್ಟೇರಿಂಗ್ ಚಾಲಕನ ಅನುಕೂಲಕ್ಕೆ ತಕ್ಕಂತೆ ಮೇಲೆ-ಕೆಳಕ್ಕೆ ಬದಲಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ಸುರಕ್ಷತೆಗೆ ಗರಿಷ್ಠ ಗಮನ ನೀಡಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.