ಚಿಕ್ಕಬಳ್ಳಾಪುರ: ರೇಷ್ಮೆ ಉದ್ಯಮದಲ್ಲಿ ಆಗುತ್ತಿರುವ ಆರ್ಥಿಕ ಏರುಪೇರಿನಿಂದಾಗಿ ರೇಷ್ಮೆ ಕೃಷಿಕರೊಂದಿಗೆ ವ್ಯಾಪಾರಸ್ಥರು, ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಕೃಷಿ ಅವಲಂಬಿತರು ಸಂಕಷ್ಟಕ್ಕೀಡಾಗಿದ್ದಾರೆ.

ನಿರೀಕ್ಷೆ ಮತ್ತು ಮಾರುಕಟ್ಟೆ ಬೇಡಿಕೆಗೆ ಅನುಸಾರವಾಗಿ ರೇಷ್ಮೆಗೂಡು ಬೆಳೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಗೂಡು ಕೊರತೆಯಿಂದಾಗಿ ನೂಲು ಬಿಚ್ಚಾಣಿಕೆದಾರರು ಕಂಗಾಲಾಗಿದ್ದಾರೆ. ರೇಷ್ಮೆ ಉದ್ಯಮದಲ್ಲಿ ತಲೆದೋರಿರುವ ಸಮಸ್ಯೆಗಳ ಸರಮಾಲೆಯಿಂದ ಯಾವಾಗ ಮುಕ್ತಿ ದೊರೆಯುವುದೋ ಎಂಬ ಅನಿಶ್ವಿತತೆ ಅವರೆಲ್ಲರಲ್ಲೂ ಕಾಡುತ್ತಿದೆ.

ಈಚಿನ ಕೆಲ ತಿಂಗಳುಗಳಿಂದ ರೇಷ್ಮೆಗೂಡು ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದ ರೇಷ್ಮೆಗೂಡು ವ್ಯಾಪಾರಕ್ಕೆ ಹಿನ್ನಡೆ ಉಂಟಾಗಿದೆ. `ನೀರಿನ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದ ಅಗತ್ಯವಿದ್ದಷ್ಟು ರೇಷ್ಮೆಗೂಡು ಬೆಳೆಯಲು ಸಾಧ್ಯವಾಗುತ್ತಿಲ್ಲ' ಎಂದು ರೇಷ್ಮೆ ಕೃಷಿಕರು ಹೇಳಿದರೆ, `ರೇಷ್ಮೆ ಮಾರುಕಟ್ಟೆಗೆ ಬೇಡಿಕೆ ಅನುಸಾರವಾಗಿ ರೇಷ್ಮೆಗೂಡುಗಳೇ ಬಾರದಿದ್ದರೆ, ನಾವು ಈ ಉದ್ಯಮದಲ್ಲಿ ಇರುವುದಾದರೂ ಹೇಗೆ? ಆಯಾ ದಿನದ ದುಡಿಮೆಯನ್ನು ನಂಬಿಕೊಂಡು ಬದುಕುವ ನಮ್ಮ ಗತಿಯೇನು' ಎಂದು ನೂಲು ಬಿಚ್ಚಾಣಿಕೆದಾರರು, ಕೂಲಿಕಾರ್ಮಿಕರು ಭೀತಿ ವ್ಯಕ್ತಪಡಿಸುತ್ತಾರೆ.

ಗಣನೀಯ ಇಳಿಕೆ: ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ರೇಷ್ಮೆ ಗೂಡಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ರೇಷ್ಮೆ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಕಾಣಸಿಗುತ್ತಿದ್ದ ರೇಷ್ಮೆ ಕೃಷಿಕರ ಮತ್ತು ನೂಲು ಬಿಚ್ಚಾಣಿಕೆದಾರರ ದಟ್ಟಣೆ ಕಣ್ಮರೆಯಾಗಿದೆ. ಮುಂಜಾನೆಯೇ ನೀರಸ ವಾತಾವರಣ ಇರುತ್ತದೆ. ರೇಷ್ಮೆ ಕೃಷಿಕರು ಇವತ್ತಾದರೂ ಬರುತ್ತಾರೋ ಇಲ್ಲವೋ? ಒಂದು ವೇಳೆ ರೇಷ್ಮೆ ಕೃಷಿಕರು ಬಂದರೂ ಅವರು ಮಾರುವ ಅಲ್ಪ ಪ್ರಮಾಣದ ರೇಷ್ಮೆಗೂಡನ್ನು ಹಂಚಿಕೊಳ್ಳಲು ಹರ ಸಾಹಸ ಪಡಬೇಕು ಎಂದು ರೇಷ್ಮೆ ನೂಲು ಬಿಚ್ಚಾಣಿಕೆದಾರ ಅಬ್ದುಲ್ ಅಳಲು ತೋಡಿಕೊಂಡರು.

`ನಮ್ಮ ತಂದೆಯವರ ಕಾಲದಿಂದಲೂ ನಾವು ರೇಷ್ಮೆ ಉದ್ಯಮವನ್ನೇ ನಂಬಿಕೊಂಡು ಬಂದಿದ್ದೇವೆ. ಮೊದಲೆಲ್ಲ ಟನ್ಗಟ್ಟಲೇ ರೇಷ್ಮೆಗೂಡು ಬರುತ್ತಿದ್ದ ಕಾರಣ ನಮಗೆ ಜೀವನ ನಿರ್ವಹಣೆ ಬಗ್ಗೆ ಯಾವುದೇ ಭಯ ಇರಲಿಲ್ಲ. ಆಯಾ ದಿನದ ದುಡಿಮೆ ಜೀವನಕ್ಕೆ ಸಾಕಾಗುತಿತ್ತು. ಕುಟುಂಬವನ್ನು ನಿರ್ವಹಿಸಲು ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ದಿನಕ್ಕೆ 100 ರೂಪಾಯಿ ದುಡಿಯುವುದು ಕಷ್ಟವಾಗಿದೆ. ನೂಲು ಬಿಚ್ಚಾಣಿಕೆ ಬಿಟ್ಟರೆ, ಬೇರೆ ಕೆಲಸ ಮಾಡುವುದು ನಮಗೆ ಗೊತ್ತಿಲ್ಲ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ' ಎಂದು ಅವರು ಹೇಳಿದರು.

`ಚಿಕ್ಕಬಳ್ಳಾಪುರ ರೇಷ್ಮೆ ಮಾರುಕಟ್ಟೆಗೆ ಮೊದಲು 1ರಿಂದ 2 ಟನ್ಗಳಷ್ಟು ರೇಷ್ಮೆಗೂಡು ಬರುತ್ತಿತ್ತು. ಆದರೆ ಈ ಬಾರಿಗೆ 150ರಿಂದ 200 ಕೆಜಿ ಬಂದರೆ ಹೆಚ್ಚು ಎಂಬ ಸ್ಥಿತಿ ಇದೆ. 75ರಿಂದ 100ರಷ್ಟು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ರೇಷ್ಮೆ ಕೃಷಿಕರ ಸಂಖ್ಯೆ ಈಗ 5ರಿಂದ 10ಕ್ಕೆ ಇಳಿದಿದೆ. ಕೆಜಿಗೆ 190ರಿಂದ 220 ರೂಪಾಯಿಗೆ ಮಾರಾಟವಾಗುತ್ತಿದ್ದ ರೇಷ್ಮೆಗೂಡು ಈಗ 300ರಿಂದ 340 ರೂಪಾಯಿಗೆ ಏರಿದೆ' ಎಂದ ರೈತ ಶ್ರೀನಿವಾಸ್ ಪ್ರತಿಕ್ರಿಯಿಸಿದರು.

`ಮೂರು ವರ್ಷಗಳಿಂದ ಬರದ ಛಾಯೆ ಆವರಿಸಿದ್ದು, ಮಳೆಯೇ ಆಗಿಲ್ಲ. ಅಂತರ್ಜಲದ ಪ್ರಮಾಣ ಕುಸಿಯುತ್ತಿರುವುದರಿಂದ ನೀರು ಸಿಗುವುದೇ ಕಷ್ಟಕರವಾಗಿದೆ. ಇದಲ್ಲದೇ ಕೂಲಿಕಾರ್ಮಿಕರ ಸಮಸ್ಯೆಯು ವ್ಯಾಪಕವಾಗಿದೆ. ರೇಷ್ಮೆಗೂಡು ಬೆಳೆಯಲು ಉತ್ಪಾದನಾ ವೆಚ್ಚ ದುಬಾರಿಯಾಗುತ್ತಿದೆ ಹೊರತು ಕಿಂಚಿತ್ ಲಾಭವೂ ಸಿಗುತ್ತಿಲ್ಲ. ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿನ ಬೆಲೆಯು 600 ರಿಂದ 800 ರೂಪಾಯಿ ಆಗಿದೆ. ಹೀಗಿರುವಾಗ 340 ರೂಪಾಯಿಗೆ ಒಂದು ಕೆಜಿ ರೇಷ್ಮೆಗೂಡು ಮಾರಿದರೆ, ನಮಗೆ ಸಿಗುವ ಲಾಭವಾದರೂ ಏನು' ಎಂದು ಅವರು ನೊಂದು ನುಡಿದರು.

`ರೇಷ್ಮೆ ಉದ್ಯಮದಲ್ಲಿನ ಅವಸ್ಥೆ ಕಂಡು ಕೆಲವರು ಜಮೀನು ಮಾರಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಬೇರೆ ಬೆಳೆಗಳನ್ನು ಬೆಳೆಯುವತ್ತ ಆಸಕ್ತಿ ತೋರುತ್ತಿದ್ದಾರೆ. ರೇಷ್ಮೆ ಬೆಳೆ ಮತ್ತು ರೇಷ್ಮೆಗೂಡಿನ ಸಹವಾಸವೇ ಬೇಡವೆಂದು ದೂರವಾಗುತ್ತಿದ್ದಾರೆ. ಈ ಕಾರಣದಿಂದಲೂ ರೇಷ್ಮೆಗೂಡಿನ ಉತ್ಪನ್ನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂತಹದ್ದೇ ಪರಿಸ್ಥಿತಿ ಮುಂದುವರೆದರೆ, ಮುಂದಿನ ಕೆಲ ವರ್ಷಗಳಲ್ಲಿ ರೇಷ್ಮೆ ಉದ್ಯಮ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ರೇಷ್ಮೆ ನಾಡು ಎಂಬ ಖ್ಯಾತಿಯೇ ಕಳೆದು ಹೋಗಲಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದಿಕ್ಕೇ ತೋಚುತ್ತಿಲ್ಲ
ಕಳೆದ ಹಲವು ವರ್ಷಗಳಿಂದ ರೇಷ್ಮೆಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ಆದರೆ ಈಗ ಆರ್ಥಿಕ ಸಂಕಷ್ಟದಿಂದ ಕೃಷಿ ಚಟುವಟಿಕೆ ಮಾಡುವುದೇ ಕಷ್ಟವಾಗಿದೆ. ಹಿಪ್ಪು ನೇರಳೆ ಸೊಪ್ಪು, ನೀರು, ಕೂಲಿ ಕಾರ್ಮಿಕರ ಮೇಲೆ ಎಷ್ಟೇ ಬಂಡವಾಳ ಸುರಿದರೂ ಸ್ವಲ್ಪವೂ ಲಾಭ ಬರುತ್ತಿಲ್ಲ. ಮುಂದೇನು ಎಂಬ ಬಗ್ಗೆ ದಿಕ್ಕೇ ತೋಚುತ್ತಿಲ್ಲ.
-ಬಾಲಪ್ಪ, ನೂಲು ಬಿಚ್ಚಾಣಿಕೆದಾರರು

ಸಂಕಷ್ಟಕ್ಕೆ ಕೊನೆಯಿಲ್ಲ
ಕಳೆದ ಜನವರಿಯಿಂದ ರೇಷ್ಮೆ ಉದ್ಯಮದಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೋರುತ್ತಿದೆ. ಒಮ್ಮೆ ರೇಷ್ಮೆಗೂಡಿನ ಬೆಲೆ ದಿಢೀರ್ ಕುಸಿತ ಕಂಡರೆ, ಮತ್ತೊಮ್ಮೆ ದಿಢೀರ್ ಏರಿಕೆಯಾಗಿರುತ್ತದೆ. ಬೆಲೆಗಳ ಏರಿಳಿತದಲ್ಲಿ ದೈನಂದನ ಜೀವನ ನಡೆಸುವುದಾದರೂ ಹೇಗೆ? ಈಗಿನ ಪರಿಸ್ಥಿತಿ ನೋಡಿದರೆ, ಸಂಕಷ್ಟಕ್ಕೆ ಕೊನೆಯಿಲ್ಲ ಅಂತ ಅನ್ನಿಸುತ್ತದೆ.
-ವೆಂಕಟರೆಡ್ಡಿ, ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.