ರೇಸು... ರಂಗು

ಮಂಗಳವಾರ, ಜೂಲೈ 16, 2019
25 °C

ರೇಸು... ರಂಗು

Published:
Updated:

ಖುರಪುಟದ ಸದ್ದು. ಅಂಗೈ ಅಗಲ ಮೀರಿದ ಮೊಬೈಲ್‌ಗಳ ಹಿಡಿದವರಿಂದ ಸಂದೇಶಗಳ ವಿನಿಮಯ. ಗೆಲ್ಲುವ ಕುದುರೆಗಳ ಕುರಿತ ಲೆಕ್ಕಾಚಾರ. ಗಂಧವತಿಯರ ಪರಿಮಳ ತೀಡುವ ಗಾಳಿಯ ಸಂಕೀರ್ಣ ಗಮಲು.ಸೂಟು-ಬೂಟು ಧರಿಸಿದವರ ಠಾಕುಠೀಕು ನಡೆ. ವಯ್ಯಾರಿಯರಿಗಂತೂ ಕೊರತೆ ಇಲ್ಲ. ಕ್ಯಾಮೆರಾ ಕಣ್ಣುಗಳು ಅಳೆದಷ್ಟೂ ಕಂತದ ಬಣ್ಣ. ತಂಪು ಹವೆಯಲ್ಲೂ ತಣ್ಣಗಿನ ಬಿಯರ್ ಹೀರುವ ತುಟಿಗಳು. ಸೆಲೆಬ್ರಿಟಿಗಳು, ನಟ-ನಟಿಯರು, ಮಾಡೆಲ್‌ಗಳು, ಉದ್ಯಮಿಗಳು... ಅಬ್ಬಾ ಎಂತೆಂಥ ಜನ! ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಭಾನುವಾರ (ಜು.14) ನಡೆದ ಕಿಂಗ್‌ಫಿಷರ್ ಡರ್ಬಿ ರೇಸ್‌ನ ಸಂದರ್ಭದಲ್ಲಿ ಕಂಡ ಮುಖಗಳಿವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry