ಶುಕ್ರವಾರ, ಮೇ 14, 2021
31 °C

ರೈಡರ್ಸ್ ಇಮ್ಮಡಿ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟಕ್ (ಪಿಟಿಐ): ಸೋಲಿನ ಸರಪಣಿಯ ಕೊಂಡಿ ಕಳಚಿಕೊಳ್ಳುತ್ತಿಲ್ಲ. ಅದೇ ಡೆಕ್ಕನ್ ಚಾರ್ಜರ್ಸ್ ಆತಂಕ. ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ನಾಲ್ಕು ಪಂದ್ಯಗಳು ಕಳೆದು ಹೋಗಿವೆ. ಇನ್ನೂ ಗೆಲುವು ಕೈಗೆಟುಕದ ಕುಸುಮ.ನಾಯಕ ಕುಮಾರ ಸಂಗಕ್ಕಾರ ಮೇಲೆ ಒತ್ತಡ ಹೆಚ್ಚಿದೆ. ನೆಲಕಚ್ಚಿರುವ ತಂಡಕ್ಕೆ ಮೆಚ್ಚುವಂಥ ಜಯವೊಂದನ್ನು ದೊರಕಿಸಿಕೊಡಬೇಕು. ಐದನೇ ಪಂದ್ಯಕ್ಕೂ ಮುನ್ನ ಅಂಥದೇ ಆಶಯ ಮೊಳಕೆಯೊಡೆದಿದೆ. 2010ರಲ್ಲಿ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ಗೆದ್ದಿದ್ದ ಡೆಕ್ಕನ್ ಚಾರ್ಜರ್ಸ್ ಅಂಥ ಫಲಿತಾಂಶ ಮತ್ತೊಮ್ಮೆ ಸಾಧ್ಯವಾಗಬೇಕೆಂದು ನಿರೀಕ್ಷಿಸಿದೆ.ಭಾನುವಾರದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಆಘಾತ ನೀಡುವಂಥ ಜಯವನ್ನು `ಸಂಗಾ~ ಬಯಸಿದ್ದಾರೆ. ಆದರೆ ಶಾರೂಖ್ ಖಾನ್ ಒಡೆತನದ ರೈಡರ್ಸ್ ಸುಲಭದ ತುತ್ತಾಗುವ ತಂಡವಂತೂ ಅಲ್ಲ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಅದು ಸ್ಥಿರವಾದ ಪ್ರದರ್ಶನ ನೀಡುತ್ತ ಸಾಗಿಲ್ಲದಿದ್ದರೂ, ಚಾರ್ಜರ್ಸ್‌ಗೆ ಹೋಲಿಸಿದಲ್ಲಿ ಬಹಳಷ್ಟು ಉತ್ತಮ ಸ್ಥಿತಿಯಲ್ಲಿದೆ.ಪಂದ್ಯ ಆರಂಭ: ರಾತ್ರಿ 8.00ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.