ಕೇಂದ್ರಪಾಡ(ಒಡಿಶಾ): ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಈತನ ಸಾಧನೆಗೆ ಬಡತನ ಅಡ್ಡಿಯಾಗಲೇ ಇಲ್ಲ. ಯಾವುದೇ ಅಡ್ಡಿ ಆತಂಕಗಳನ್ನು ಲೆಕ್ಕಿಸದೇ ಇಲ್ಲೊಬ್ಬ ಸಣ್ಣ ರೈತನ ಮಗ ಐಇಎಸ್ (ಭಾರತೀಯ ಎಂಜಿನಿಯರಿಂಗ್ ಸೇವೆ) ಪರೀಕ್ಷೆಯಲ್ಲಿ ತೇರ್ಗೆಡೆಯಾಗುವ ಮೂಲಕ ಉತ್ತಮ ಸ್ಥಾನ ಪಡೆದಿದ್ದಾನೆ.

ಶಿಶಿರ್ಕುಮಾರ್ ಪ್ರಧಾನ್ ಎಂಬ ಯುವಕ 25ನೇ ವಯಸ್ಸಿಗೆ ಐಇಎಸ್ ಪಾಸಾಗಿದ್ದಾನೆ. ಒಡಿಶಾದ ಕೇಂದ್ರಪಾಡ ಜಿಲ್ಲೆಯ ನಿಗಿನಿಪುರ ಎಂಬ ಹಳ್ಳಿಯವನಾದ ಈತನ ತಂದೆ ಸಣ್ಣ ಹಿಡುವಳಿದಾರ. ಶಿಶಿರ್ ಸಾಧನೆಯಿಂದ ಆತನ ಪೋಷಕರು, ಸಹೋದರರು ಹಾಗೂ ಶಿಕ್ಷಕ ವೃಂದ ಸಂತಸ ಇಮ್ಮಡಿಗೊಂಡಿದೆ.

ಅಡ್ಡದಾರಿ ಹಿಡಿಯದೇ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದೇನೆ. ಕಷ್ಟಗಳ ನಡುವೆ ಪೋಷಕರು ನನಗೆ ತುಂಬಾ ಪ್ರೋತ್ಸಾಹ ನೀಡಿದರು ಎಂದು ಶಿಶಿರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.