ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವ ‘ಯುಎಎಸ್ಬಿ ಇ–ಕೃಷಿ’ ವೆಬ್ಸೈಟನ್ನು ಶೀಘ್ರದಲ್ಲೇ ರಾಜ್ಯದ ರೈತರಿಗೆ ಸಮರ್ಪಿಸಲಿದೆ.

ಒಂದು ಲಕ್ಷ ಪುಟಗಳನ್ನು ಹೊಂದಿರುವ ಈ ವೆಬ್ಸೈಟ್ನಲ್ಲಿ ಆಹಾರ ಧಾನ್ಯ, ವಾಣಿಜ್ಯ ಬೆಳೆಗಳು, ಹಣ್ಣು ತರಕಾರಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳ ಬಗ್ಗೆ ಮಾಹಿತಿ ಇದೆ.

ರೈತರು ಈ ವೆಬ್ಸೈಟ್ನಿಂದ ಮಾಹಿತಿ ಪಡೆಯುವುದಲ್ಲದೆ, ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ರೈತರು ಎದುರಿಸುವ ಸಮಸ್ಯೆಗಳನ್ನು ವಿವರಗಳೊಂದಿಗೆ ಈ ವೆಬ್ಸೈಟ್ ವಿಳಾಸಕ್ಕೆ ಕಳುಹಿಸಿದರೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅದಕ್ಕೆ ಪರಿಹಾರ ಸೂಚಿಸುತ್ತಾರೆ. ಬೆಳೆಗಳಿಗೆ ರೋಗ ತಗುಲಿದಾಗ ಮೊಬೈಲ್ನಲ್ಲಿ ಅದರ ಚಿತ್ರಗಳನ್ನು ತೆಗೆದು ಕಳುಹಿಸಿದರೆ, ವಿಜ್ಞಾನಿಗಳು ತಕ್ಷಣವೇ ಆನ್ಲೈನ್ನಲ್ಲಿ ಉತ್ತರಿಸುತ್ತಾರೆ.

ವೆಬ್ಸೈಟ್ನಲ್ಲಿನ ಮಾಹಿತಿಗಳು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಲಭ್ಯವಾಗಲಿವೆ. ಇದರಿಂದಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ರೈತರು ಮೊಬೈಲ್ನಲ್ಲೇ ಎಲ್ಲ ಮಾಹಿತಿಗಳನ್ನು ಪಡೆಯಬಹುದು. ಅಂದಾಜು ₨2ಕೋಟಿ ವೆಚ್ಚದ ಈ ವೆಬ್ಸೈಟ್ಗೆ ‘ನ್ಯಾಷನಲ್ ಇನ್ಫರ್ಮ್ಯಾಟಿಕ್ ಸೆಂಟರ್ ’ ತಾಂತ್ರಿಕ ನೆರವನ್ನು ಒದಗಿಸಿದೆ. ಸದ್ಯಕ್ಕೆ 10–12 ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.

ವೆಬ್ಸೈಟ್ ಪ್ರಾರಂಭವಾದ ನಂತರ ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ನಾಲ್ಕು ಮಂದಿ ವಿಜ್ಞಾನಿಗಳು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಎನ್.ನಾಗರಾಜ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.