ಮಂಗಳವಾರ, ಜನವರಿ 28, 2020
23 °C

ರೈತರಿಗೆ ಸವಲತ್ತು ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌:   ಬರದ ಬವಣೆಯಲ್ಲಿ ಜೀವನ ಸಾಗಿಸುತ್ತಿರುವ ರೈತರಿಗೆ ಬದುಕುವ ದಾರಿ ತೋರುವ ಕೆಲಸ ತಕ್ಷಣ ಆಗಬೇಕು ಎಂದು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದರು.

ಬೆಮಲ್‌ನಗರದಲ್ಲಿ ಸೋಮವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಂತ್ಯ ರೈತ ಸಂಘದ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ಬಗರ್‌ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. ವ್ಯವಸಾಯಕ್ಕೆ ಉತ್ತಮ ವಾತಾವರಣವನ್ನು ನಿರ್ಮಿಸಿಕೊಡಬೇಕು. ಗ್ರಾಮಗಳಲ್ಲಿ ಬಡವರಿಗೆ ಮನೆ ನಿವೇಶನಗಳನ್ನು ಹಂಚಬೇಕು ಮತ್ತು ಬ್ಯಾಂಕ್‌ಗಳಲ್ಲಿ ಐವತ್ತು ಸಾವಿರ ರೂಪಾಯಿಗಳವರೆಗೂ ಸಾಲ ಸುಲಭವಾಗಿ ಸಿಗಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಸೌಕರ್ಯಕ್ಕೆ ಒತ್ತಾಯಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ರಸ್ತೆ ತಡೆ ಕೂಡ ನಡೆಸಲಾಯಿತು.ದೊಡ್ಡೂರು ಕರಪನಹಳ್ಳಿ–ಕಾರಹಳ್ಳಿ– ಬಂಗಾರಪೇಟೆ ಮಾರ್ಗ, ಬೇತಮಂಗಲ–­ಸುಂದರಪಾಳ್ಯ–ಮಹದೇವಪುರ ಮಾರ್ಗ, ಆಲಿಕಲ್ಲು ಮೂಲಕ ರಾಬರ್ಟಸನ್‌ಪೇಟೆ ಮಾರ್ಗದಲ್ಲಿ ಬಸ್‌ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಲಾಯಿತು. ಸಿಐಟಿಯು ಮುಖಂಡ ಅರ್ಜುನನ್‌, ಸಂಘಟನಾ ಕಾರ್ಯದರ್ಶಿ ಪಿ.ಶ್ರೀನಿವಾಸ್‌ , ಡಿವೈಎಫ್‌ಐ ಮುಖಂಡ ತಂಗರಾಜ್‌ ಮಾತನಾಡಿದರು.

ಪ್ರತಿಕ್ರಿಯಿಸಿ (+)