ಹನುಮಸಾಗರ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಇಲಾಖೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜಗಳನ್ನು ಪಡೆಯುವುದಕ್ಕಾಗಿ ಬುಧವಾರ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಮುಗಿಬಿದ್ದಿರುವುದು ಕಂಡು ಬಂತು.

ನೂರಾರು ರೈತರು ಒಂದೇ ದಿನದಲ್ಲಿ ಬೀಜ ಪಡೆಯಲು ಆಗಮಿಸಿದ್ದರಿಂದ ನೂಕು ನುಗ್ಗಲು, ಗಲಾಟೆ, ಜಗಳಗಳು ನಡೆದವು.
ರೈತ ಸಂಪರ್ಕ ಕೇಂದ್ರದಲ್ಲಿ ನಾಲ್ಕಾರು ದಿನಗಳ ಹಿಂದೆಯೇ ಬೀಜಗಳು ಬಂದಿದ್ದವಾದರೂ ಹೆಚ್ಚಿನ ಪ್ರಮಾಣದಲ್ಲಿ ಬರದ ರೈತರು ಚುನಾವಣೆ ಪ್ರಕ್ರಿಯೆ ಮುಗಿದ ಕಾರಣ ಬಿತ್ತನೆ ಕೆಲಸಕ್ಕೆ ತೊಡಗಿರುವುದರಿಂದ ಈ ಬಗೆಯಲ್ಲಿ ಗದ್ದಲ ಉಂಟಾಗಲು ಕಾರಣವಾಗಿದೆ.

ಈ ಭಾಗದಲ್ಲಿ ಬಿತ್ತನೆಗೆ ಯೋಗ್ಯವಾಗುವ ರೀತಿಯಲ್ಲಿ ಮಳೆಯಾಗಿದ್ದರಿಂದ ಸಾಮೂಹಿಕ ಬಿತ್ತನೆ ಕಾರ್ಯ ನಡೆದಿದೆ. ‘ಶುಕ್ರವಾರ ಚುನಾವಣೆ ಫಲಿತಾಂಶ ಬರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ಹೋಗಬೇಕು, ಸಾಧ್ಯವಾದಷ್ಟು ಬುಧವಾರ, ಮತ್ತು ಗುರುವಾರ ಬಿತ್ತನೆಗೆ ಮುಗಿಸಬೇಕಾಗಿದೆ’ ಎಂದು ಕಬ್ಬರಗಿ ಗ್ರಾಮದ ರೈತ ಭರಮಪ್ಪ ಹೇಳಿದರು.

‘ಕಾವೇರಿ, ಗಂಗಾ ಕಾವೇರಿ, ನ್ಯೂ ಜೀನ್ಸ್(ನಿತ್ಯ), ಧಾನ್ಯ, ಕರ್ನಾಟಕ ಹೈಟೆಕ್ಸ್ ಕಂಪನಿಗಳ ಸೂರ್ಯಕಾಂತಿ, ಸಜ್ಜೆ, ಮೆಕ್ಕೆ ಜೋಳ, ಹೆಸರು, ತೊಗರಿ ಬೀಜಗಳನ್ನು ವಿತರಿಸಲಾಗುತ್ತಿದೆ. ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ ಮತ್ತು ಹೆಸರಿನ ಬೀಜ ಸೇರಿದಂತೆ ಮೆಕ್ಕೆ ಜೋಳ, ಸಜ್ಜೆಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ‘ಎಂದು ಕೃಷಿ ಅಧಿಕಾರಿ ಅಮರೇಶ ಮಡಿವಾಳರ ತಿಳಿಸಿದರು.

ಸದ್ಯ 85 ಕ್ವಿಂಟಲ್ ಮೆಕ್ಕೆಜೋಳ, 30 ಕ್ವಿಂಟಲ್ ಸಜ್ಜೆ, 20 ಕ್ವಿಂಟಲ್ ಸೂರ್ಯಕಾಂತಿ ದಾಸ್ತಾನು ಇದೆ. 25 ಕ್ವಿಂಟಲ್ ಹೆಸರು ಬೀಜ ಮಾರಾಟವಾಗಿದೆ. ಹನುಮಸಾಗರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 8,000 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.