ಮುಂಡರಗಿ: ನೂತನ ರೈಲು ಮಾರ್ಗ ಮಂಜೂರಾತಿಯನ್ನು ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ನವದೆಹಲಿಯ ಜಂತರ್-ಮಂತರ್ ವೃತ್ತದಲ್ಲಿ ಮಾರ್ಚ್ 5ರಿಂದ ಪ್ರತಿಭಟನೆ ಕೈಗೊಳ್ಳಲು ಸ್ಥಳೀಯ ರೈಲ್ವೆ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ನವದೆಹಲಿಗೆ ತೆರಳಿದರು.

ಗದಗದಿಂದ ಮುಂಡರಗಿ, ಹೂವಿನ ಹಡಗಲಿ, ಹರಿಹರ ಮಾರ್ಗವಾಗಿ ಕೊಟ್ಟೂರಿಗೆ ನೂತನ ರೈಲು ಮಾರ್ಗ ಪ್ರಾರಂಭಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರು. ಪ್ರಸ್ತುತ ವರ್ಷದ ರೈಲ್ವೆ ಬಜೆಟ್ನಲ್ಲಿ ಮಮತಾ ಬ್ಯಾನರ್ಜಿ ಅವರು ಈ ಕುರಿತು ಯಾವುದೆ ಪ್ರಸ್ತಾಪ ಮಾಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರುವವರೆಗೆ ನವದೆಹಲಿಯ ಜಂತರ್-ಮಂತರ್ ವೃತ್ತದಲ್ಲಿ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮುಂಡರಗಿ, ಹಡಗಲಿ ಮಾರ್ಗ ವಾಗಿ ನೂತನ ರೈಲು ಮಾರ್ಗವನ್ನು ಪ್ರಾರಂಭಿಸಲು ಕೇಂದ್ರ ಸರಕಾರವು ಮೃದು ಧೋರಣೆಯನ್ನು ಅನುಸರಿಸುತ್ತಿದ್ದು ಪ್ರಸ್ತುತ ವರ್ಷದ ರೇಲ್ವೆ ಬಜಟ್ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ. ನೂತನ ರೈಲು ಮಾರ್ಗವನ್ನು ಪ್ರಾರಂಭಿಸುವಂತೆ ಕಳೆದ ವರ್ಷ ರಾಜ್ಯ ಸಚಿವ ಕೆ.ಮುನಿಯಪ್ಪ, ಮಮತಾ ಬ್ಯಾನರ್ಜಿ ಹಾಗೂ ಕೇಂದ್ರದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು ಆದಾಗ್ಯೂ ಕೇಂದ್ರ ಸರಕಾರ ಮುಂಡರಗಿ ಮಾರ್ಗವಾಗಿ ನೂತನ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರುತ್ತಿಲ್ಲ ಎಂದು ಅವರು ದೂರಿದರು.

ತಾಲ್ಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಜೆಡಿಯು ಅಧ್ಯಕ್ಷ ಬಸವರಾಜ ದೇಸಾಯಿ, ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಬಸವರಾಜ ನವಲಗುಂದ, ಹಾಲಪ್ಪ ಅರಹುಣಸಿ, ಹನುಮಪ್ಪ ಸಂಸಿ, ಶರಣಪ್ಪ ಗೋಣಿಸ್ವಾಮಿ, ಬಸಪ್ಪ ಬಂಡಿವಡ್ಡರ, ಯಲ್ಲಪ್ಪ ಎಳವತ್ತಿ, ಶಿವಪ್ಪ ನವಲಗುಂದ, ವೈ.ಬಿ. ಹೊಂಬಳಗಟ್ಟಿ, ಕೋಟೇಶ ಬೇವಿನಮರದ, ಮಲ್ಲೇಶ ಹರಿಜನ, ಪ್ರಕಾಶ ಪೂಜಾರ, ಅಶೋಕ ಹರಿಜನ ಮೊದಲಾದವರು ನವದೆಹಲಿಗೆ ತೆರಳಿದ್ದು ತಮ್ಮ ಬೇಡಿಕೆ ಈಡೇರುವವರೆಗೆ ಅಲ್ಲಿಯೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.