ಭಾನುವಾರ, ಜೂನ್ 13, 2021
25 °C

ರೈಲಿನಲ್ಲಿ ಮೂಗು ಮುಚ್ಚಬೇಕಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೂರ ಪ್ರಯಾಣದ ರೈಲುಗಳಲ್ಲಿ ನೈರ್ಮಲ್ಯ ಕಾಪಾಡುವ ಸಲುವಾಗಿ ದುರ್ಗಂಧ ರಹಿತ, ಪರಿಸರ ಸ್ನೇಹಿ ಹಸಿರು ಶೌಚಾಲಯಗಳನ್ನು ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.ಮುಂದಿನ ಹಣಕಾಸು ವರ್ಷದಲ್ಲಿ ಇಂತಹ 2,500 ಶೌಚಾಲಯಗಳನ್ನು ಅಳವಡಿಸಲಾಗುತ್ತದೆ. ಈಗಿರುವ ಸಾಂಪ್ರದಾಯಿಕ ಮಾದರಿಯಲ್ಲಿ ತ್ಯಾಜ್ಯ ನೇರವಾಗಿ ಹಳಿಗಳ ಮೇಲೇ ಸಂಗ್ರಹವಾಗುತ್ತದೆ.ಆದರೆ ಹೊಸ ವಿಧಾನದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ರೈಲಿನೊಳಗೇ ಟ್ಯಾಂಕ್ ಒಂದನ್ನು ನಿರ್ಮಿಸಲಾಗುತ್ತದೆ.  ಈ ಟ್ಯಾಂಕ್‌ನೊಳಗಿನ ಬ್ಯಾಕ್ಟೀರಿಯಾಗಳು ತ್ಯಾಜ್ಯವನ್ನು ಸೇವಿಸುವ ಮೂಲಕ, ಅಪಾಯಕಾರಿಯಲ್ಲದ ಅನಿಲ ಮತ್ತು ನೀರಾಗಿ ಅದನ್ನು ಬದಲಾಯಿಸುತ್ತವೆ.ರೈಲುಗಳಲ್ಲಿ ಮೂಲ ಸೌಕರ್ಯ ಮತ್ತು ಸುರಕ್ಷತೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಇಲಾಖೆ ನೇಮಿಸಿದ್ದ ತಜ್ಞರ ಸಮಿತಿಗಳು ತಮ್ಮ ಶಿಫಾರಸುಗಳಲ್ಲಿ `ಹಸಿರು ಶೌಚಾಲಯ~ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿವೆ. ಇದರಿಂದ  ಹಳಿಗಳ ಕೊರೆತವನ್ನೂ ತಪ್ಪಿಸಬಹುದು ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಒಂದು ಶೌಚಾಲಯ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ತಗುಲಲಿದ್ದು, ಕಪುರ್ತಲದಲ್ಲಿರುವ ಬೋಗಿ ನಿರ್ಮಾಣ ಕಂಪೆನಿಯಲ್ಲಿ ಇವುಗಳನ್ನು ನಿರ್ಮಿಸಲಾಗುವುದು. ಕೆಲವು ರೈಲುಗಳಲ್ಲಿ ಈಗಾಗಲೇ ಇವುಗಳನ್ನು ಅಳವಡಿಸಲಾಗಿದೆ. ಮುಂದಿನ ಶೌಚಾಲಯಗಳಿಗೆ ಹೊಸ ತಂತ್ರಜ್ಞಾನ  ಅಳವಡಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.