ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಕೆಲವು ನಿಲ್ದಾಣಗಳಲ್ಲಿ ವಿವಿಧ ರೈಲುಗಳಿಗೆ ಒದಗಿಸಲಾಗಿದ್ದ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಡಿಸೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಶವಂತಪುರ- ನಿಜಾಮುದ್ದೀನ್ ಎಕ್ಸ್ಪ್ರೆಸ್ಗೆ (ರೈಲು ಸಂಖ್ಯೆ-12629/12630) ಧಾರವಾಡದಲ್ಲಿ, ಹೌರಾ- ವಾಸ್ಕೋಡಗಾಮ ರೈಲಿಗೆ (18047/18048) ಧಾರವಾಡ ಹಾಗೂ ಕೊಪ್ಪಳದಲ್ಲಿ, ಅಮರಾವತಿ ಎಕ್ಸ್ಪ್ರೆಸ್ಗೆ ತೋರಣಗಲ್ನಲ್ಲಿ, ಅಜ್ಮೀರ್- ಯಶವಂತಪುರ ಎಕ್ಸ್ಪ್ರೆಸ್ (16531/16532) ಹಾಗೂ ಜೋಧ್ಪುರ- ಯಶವಂತಪುರ ರೈಲಿಗೆ (16533/16534) ಕೊಪ್ಪಳದಲ್ಲಿ, ಯಶವಂತಪುರ- ಸೊಲ್ಲಾಪುರ ಎಕ್ಸ್ಪ್ರೆಸ್ಗೆ (16535/16536) ರಾಣೆಬೆನ್ನೂರು, ಹಾವೇರಿ, ಅಣ್ಣಿಗೇರಿ, ಹೊಳೆಆಲೂರು, ಗುಳೇದಗುಡ್ಡ, ಆಲಮಟ್ಟಿ ಹಾಗೂ ಬಸವನಬಾಗೇವಾಡಿ ರಸ್ತೆ ನಿಲ್ದಾಣಗಳಲ್ಲಿ ಒದಗಿಸಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಿಸಲಾಗಿದೆ.

ಯಶವಂತಪುರ- ವಿಜಾಪುರ ಎಕ್ಸ್ಪ್ರೆಸ್ಗೆ (17307/17308) ಆಲಮಟ್ಟಿಯಲ್ಲಿ ಹಾಗೂ ಬಸವನಬಾಗೇವಾಡಿ ರಸ್ತೆ ನಿಲ್ದಾಣದಲ್ಲಿ, ಕೊಲ್ಹಾಪುರ- ತಿರುಪತಿ ಹರಿಪ್ರಿಯ ಎಕ್ಸ್ಪ್ರೆಸ್ಗೆ (17415/17416) ಅಳ್ನಾವರ ಹಾಗೂ ಖಾನಾಪುರದಲ್ಲಿ, ಮೈಸೂರು- ಮಯಿಲಾಡುತುರೈ ಎಕ್ಸ್ಪ್ರೆಸ್ (16232/16231) ಹಾಗೂ ಮೈಸೂರು- ತೂತುಕುಡಿ ಎಕ್ಸ್ಪ್ರೆಸ್ಗೆ (16732/16731) ಕೆಂಗೇರಿ, ಕರ್ಮೇಲರಂನಲ್ಲಿ, ಚೆನ್ನೈ- ಬೆಂಗಳೂರು-ಚೆನ್ನೈ ರೈಲಿಗೆ (12027/12028) ಕಂಟೋನ್ಮೆಂಟ್ನಲ್ಲಿ, ಯಶವಂತಪುರ- ಬಾಗಲಕೋಟೆ ಎಕ್ಸ್ಪ್ರೆಸ್ (17307/17308) ಹಾಗೂ ಭುವನೇಶ್ವರ- ಬೆಂಗಳೂರು ಎಕ್ಸ್ಪ್ರೆಸ್ಗೆ (18463/18464) ಗೌರಿಬಿದನೂರಿನಲ್ಲಿ ಒದಗಿಸಲಾಗಿದ್ದ ನಿಲುಗಡೆಯನ್ನು ವಿಸ್ತರಿಸಲಾಗಿದೆ.

ಬೆಂಗಳೂರು- ಶಿವಮೊಗ್ಗ ಎಕ್ಸ್ಪ್ರೆಸ್ಗೆ (16201/16202) ತಿಪಟೂರು ಹಾಗೂ ಕಡೂರಿನಲ್ಲಿ, ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸ್ಪ್ರೆಸ್ಗೆ (16591/16592) ಬಾಣಾವರದಲ್ಲಿ, ಯಶವಂತಪುರ- ಕಣ್ಣೂರು ಎಕ್ಸ್ಪ್ರೆಸ್ಗೆ (16517/16518) ಕೆಂಗೇರಿಯಲ್ಲಿ, ಬೆಂಗಳೂರು- ಎರ್ನಾಕುಳಂ ಎಕ್ಸ್ಪ್ರೆಸ್ಗೆ (12677/12678) ಕರ್ಮೇಲರಂನಲ್ಲಿ, ಚಾಮರಾಜನಗರ- ತಿರುಪತಿ ಎಕ್ಸ್ಪ್ರೆಸ್ಗೆ (56213/56214) ತ್ಯಾಕಲ್ನಲ್ಲಿ, ಬೆಂಗಳೂರು- ಕಾಕಿನಾಡ ಶೇಷಾದ್ರಿ ಎಕ್ಸ್ಪ್ರೆಸ್ಗೆ (17209/17210) ಮಾಲೂರಿನಲ್ಲಿ ಹಾಗೂ ಬೆಂಗಳೂರು- ನಾಗರಕೋಯಿಲ್ ಎಕ್ಸ್ಪ್ರೆಸ್ಗೆ (16537/16538) ಧರ್ಮಪುರಿಯಲ್ಲಿ ಒದಗಿಸಲಾಗಿದ್ದ ನಿಲುಗಡೆಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.