ಶುಕ್ರವಾರ, ಏಪ್ರಿಲ್ 16, 2021
31 °C

ರೈಲುಗಳ ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯವು ಮೈಸೂರು ವಿಭಾಗದ ಬಳ್ಳಕೆರೆ, ಕಡೂರು ಹಾಗೂ ಬೀರೂರು ನಿಲ್ದಾಣಗಳ ನಡುವೆ ಜೋಡಿಮಾರ್ಗಕ್ಕೆ ಸಂಬಂಧಿಸಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಿದೆ.ಈ ಸಂಬಂಧ ಕಡೂರು ನಿಲ್ದಾಣದಲ್ಲಿ ಇದೇ ಎರಡರಿಂದ ಐದರವರೆಗೆ ಹಾಗೂ ಬೀರೂರು ನಿಲ್ದಾಣದಲ್ಲಿ ಇದೇ ಏಳರಿಂದ ಒಂಬತ್ತರವರೆಗೆ ಮತ್ತು ಕಡೂರು ನಿಲ್ದಾಣದಲ್ಲಿ ಇದೇ ಆರರಿಂದ ಏಳರವರೆಗೆ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ.ಇದರಿಂದಾಗಿ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ (56515), ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ (56516) ರೈಲುಗಳ ಸಂಚಾರವನ್ನು ಇದೇ ಎರಡು, ನಾಲ್ಕು ಹಾಗೂ ಏಳರಂದು ಸಂಪೂರ್ಣ ರದ್ದುಗೊಳಿಸಲಾಗಿದೆ. ಬೆಂಗಳೂರು-ಶಿವಮೊಗ್ಗ ಫಾಸ್ಟ್ ಪ್ಯಾಸೆಂಜರ್ (56917) ಹಾಗೂ ಶಿವಮೊಗ್ಗ-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ (56918) ರೈಲುಗಳನ್ನು ಇದೇ ಏಳರಿಂದ ಒಂಬತ್ತರವರೆಗೆ ಸಂಪೂರ್ಣ ರದ್ದುಗೊಳಿಸಲಾಗಿದೆ.ಶಿವಮೊಗ್ಗ-ಮೈಸೂರು ಪ್ಯಾಸೆಂಜರ್ (56269) ಹಾಗೂ ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ (56270) ರೈಲುಗಳನ್ನು ಬೀರೂರು ಹಾಗೂ ಅರಸೀಕೆರೆ ನಿಲ್ದಾಣಗಳ ನಡುವೆ ಇದೇ ಎರಡು, ನಾಲ್ಕು ಹಾಗೂ ಏಳರಂದು ಭಾಗಶಃ ರದ್ದುಗೊಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.