ಭಾನುವಾರ, ಜನವರಿ 19, 2020
°C

ರೈಲು ವಿಳಂಬ; ಕಾಡಿದ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ–ಬೆಂಗಳೂರು ಪ್ಯಾಸೆಂಜರ್‌ ರೈಲು ಬುಧವಾರ ಸರಿಯಾದ ಸಮಯಕ್ಕೆ ಸಂಚಾರ ಆರಂಭಿಸಲಿಲ್ಲ. ಸಾವಿರಾರು ಮಂದಿ ಪ್ರಯಾಣಿಕರಿಗೆ ತೊಂದರೆ­ಯಾ­ಯಿತು. ಆದರೆ ಏಕೆ ಹೀಗಾಯಿತು?  ಎಂಬ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿದರು.   ಶ್ರೀಕಂಠದತ್ತ ಒಡೆಯರ್‌ ನಿಧನದ ಹಿನ್ನೆಲೆಯಲ್ಲಿ ರೈಲು ಸಂಚಾರವೂ ಕೂಡ ಸ್ಥಗಿತಗೊಳ್ಳಲಿ ಎಂಬ ಕಾರಣಕ್ಕೆ ಕೆಲವರು ಹೀಗೆ ಮಾಡಿರಬಹುದು ಎಂದು ಒಬ್ಬರು ವ್ಯಕ್ತಪಡಿಸಿದರೆ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ­ಗೊಂಡಿದ್ದು ಅದರ ಬಿಸಿಯೂ ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮತ್ತೊಬ್ಬರು ಹೇಳಿದರು.ಇದೆಲ್ಲದಕ್ಕೂ ರೈಲ್ವೆ ಇಲಾಖೆ  ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕೆಲವರು ಆರೋಪಿಸಿದರು. ಜನರ ಸುಗಮ ಪ್ರಯಾಣಕ್ಕೆ ತೊಂದರೆ ಮಾಡಲಿ­ಯೆಂದೇ ಈ ಕೃತ್ಯ ನಡೆದಿದೆ ಎಂದು ಕೆಲವರು ತಿಳಿಸಿದರು.‘ಚಿಕ್ಕಬಳ್ಳಾಪುರದ ಜನರಲ್ಲದೇ ನಂದಿ, ಆವತಿ, ದೇವನಹಳ್ಳಿ, ಯಲಹಂಕ ಮುಂತಾದ ಪ್ರದೇಶಗಳ ನಿವಾಸಿಗಳು ಭಾರಿ ಸಮಸ್ಯೆ ಎದುರಿಸಿದರು’ ಎಂದು ಚಿಕ್ಕಬಳ್ಳಾಪುರದ ನಿವಾಸಿ ನಾಗೇಶ್‌­ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಇಡೀ ರೈಲಿಗೆ ಭದ್ರತಾ ವ್ಯವಸ್ಥೆ­ಯಿರುವುದಿಲ್ಲ. ಇದೆಲ್ಲವನ್ನು ಗಮನಿಸಿ­ರುವ ಕೆಲ ಕಿಡಿಗೇಡಿಗಳು ಬೇಕೆಂದೇ ಎಂಜಿನ್‌ನೊಳಗೆ ಮರಳು, ಜೆಲ್ಲಿಕಲ್ಲು ಪುಡಿ ರೈಲು ಸಂಚಾರ ಸ್ಥಗಿತಗೊಳಿಸಿ­ದ್ದಾರೆ ಎಂದು  ತಿಳಿಸಿದರು.

ಪ್ರತಿಕ್ರಿಯಿಸಿ (+)