ಇನ್ನು ರೈಲ್ವೆ ಟಿಕೆಟ್ಗಾಗಿ ಉದ್ದನೆಯ ಸಾಲುಗಳಲ್ಲಿ ಕಾಯಬೇಕಿಲ್ಲ. ಪ್ರಯಾಣಿಕರು ತಮ್ಮ ಟಿಕೆಟ್ ಖಾತರಿದಾಗಿ ‘ಪಿಎನ್ಆರ್’ ಸ್ಥಿತಿಯ ಜಾಡು ಹಿಡಿಯಲು ಫೋನಿನಲ್ಲಿ ನಿರಂತರವಾಗಿ ಕಾಯುತ್ತಿರಬೇಕಿಲ್ಲ. ವಿಂಡೋಸ್ ಸಾಧನಗಳಲ್ಲಿ ಪ್ರತ್ಯೇಕವಾದ ಅಧಿಕೃತ ‘ಐಆರ್ಸಿಟಿಸಿ’ ಅಪ್ಲಿಕೇಷನ್ ಮೂಲಕ ಒಂದೇ ಕ್ಷಣದಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಬಹುದು.

ವಿಂಡೋಸ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನ್ ಮತ್ತು ಪರ್ಸನಲ್ ಕಂಪ್ಯೂಟರ್(ಪಿ.ಸಿ)ಗಳಿಗೆ ಉಚಿತವಾದ ‘ಐಆರ್ಸಿಟಿಸಿ’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.ವಿಂಡೋಸ್ ಫೋನ್, ವಿಂಡೋಸ್ ೮ ಟ್ಯಾಬ್ಲೆಟ್ ಅಥವಾ ಪಿ.ಸಿ ಬಳಸಿ ನಿಮ್ಮ ಪ್ರವಾಸವನ್ನು ಬಹಳ ಸುಲಭವಾಗಿ ಯೋಜಿಸಬಹುದಾಗಿದೆ.

ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸಬಹುದು ಮತ್ತು ಸಂಚರಿಸುತ್ತಿರುವಾಗಲೇ ಇನ್ನೂ ಅನೇಕ ಕೆಲಸಗಳನ್ನು ಮಾಡಿಕೊಳ್ಳಬಹುದು.ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಯಾದ ‘ಐಆರ್ಸಿಟಿಸಿ’ ೧೯೯೯ರಲ್ಲಿ ಆರಂಭವಾಗಿದೆ. ಇದು ರೈಲ್ವೆ ಸಚಿವಾಲಯದ ಅಧೀನದಲ್ಲಿದೆ. ‘ಐಆರ್ಸಿಟಿಸಿ’ ಕೇಟರಿಂಗ್ ಸೇವೆ, ಪ್ರವಾಸದ ಪ್ಯಾಕೇಜ್ ಮತ್ತು ಇ- ಟಿಕೆಟಿಂಗ್ ಸೇವೆ ಒದಗಿಸುತ್ತಿದೆ.

‘ಐಆರ್ಸಿಟಿಸಿ ಅಧಿಕೃತ ಅಪ್ಲಿಕೇಷನ್ ಪರಿಚಯಿಸಿದ್ದು, ಇದು ವಿಂಡೋಸ್ ಸಾಧನಗಳಲ್ಲಿ ಮಾತ್ರ ಲಭ್ಯ. ದಿನದಲ್ಲಿ ಬೆಳಿಗ್ಗೆ ೮ರಿಂದ ಮಧ್ಯಾಹ್ನ -೧೨ ಗಂಟೆವರೆಗೆ ಮತ್ತು ರಾತ್ರಿ 11.30ರಿಂದ 12.30ರವರೆಗೆ ಬಿಟ್ಟರೆ ದಿನದ ಉಳಿದೆಲ್ಲ ಸಮಯವೂ ಲಭ್ಯ. ಈ ಅಪ್ಲಿಕೇಷನ್ http://apps.microsoft.com/webpdp/app/8677711b-15a9-46af-8dfa-644f37460ae0 ಮತ್ತು http://www.windowsphone.com/en-in/store/app/irctc/df6203c2-1f03-4854-b741-f3599c9f6b92 ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್, ರೈಲ್ವೆ ಮಾರ್ಗಗಳ ನಕ್ಷೆ, ರೈಲು ಆಯ್ಕೆ ಮತ್ತು ಟಿಕೆಟ್ ಬುಕಿಂಗ್ ಮಾಹಿತಿ ತಕ್ಷಣ ಒದಗಿಸುವುದೂ ಸೇರಿ ದಂತೆ ‘ಐಆರ್ಸಿಟಿಸಿ’ ಜಾಲತಾಣದಲ್ಲಿ ಸದ್ಯ ಲಭ್ಯವಿರುವ ಎಲ್ಲ ಸೇವೆ ಪಡೆಯಲು ನೆರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.