ಹುಬ್ಬಳ್ಳಿ: ರೈಲ್ವೆ ಅಭಿವೃದ್ಧಿ ಕುರಿತು ಇದೇ ತಿಂಗಳ 20ರಂದು ನಡೆಯುವ ಸಮಾಲೋಚನ ಸಭೆಯು ನೈರುತ್ಯ ರೈಲ್ವೆಯ ಕೇಂದ್ರ ಸ್ಥಾನವಾದ ಹುಬ್ಬಳ್ಳಿಯಲ್ಲಿ ನಡೆಯುವುದು ಸೂಕ್ತ ಎಂದು ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಗುರುವಾರ ಇಲ್ಲಿ ಹೇಳಿದರು.

ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇದೊಂದು ಮಹತ್ವದ ಸಭೆಯಾಗಿದ್ದು ರೈಲ್ವೆ ಅಭಿವೃದ್ಧಿ ಕುರಿತು ಚರ್ಚಿಸಲಿರುವುದು ಸಮಯೋಚಿತವಾಗಿದೆ ಎಂದರು.

ಚಪ್ಪೆ ಮೂಳೆ ಮುರಿತ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಟೀಲ ಪುಟ್ಟಪ್ಪ ಅವರು ಬೇಗ ಗುಣಮುಖರಾಗಲೆಂದು ವೇದಿಕೆಯ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಹಾರೈಸಿದರು. ಆರ್.ಆರ್.ಹೊಂಬಳ, ಮಹೇಂದ್ರ ಸಿಂಘಿ. ಅಂದಾನಪ್ಪ ಸಜ್ಜನರ, ಬಾಬಾಜಾನ್ ಮುಧೋಳ, ಬಿ.ಎ.ಮುಧೋಳ, ರಾಜಶೇಖರ ಮೆಣಸಿನಕಾಯಿ, ನಿಜಗುಣಿ, ಕೆಲಗೇರಿ, ನಂದಕುಮಾರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.