ಕಾರವಾರ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರಕೃತಿ ಚಿಕಿತ್ಸೆ ಯೋಗ, ಯುನಾನಿ ಹಾಗೂ ಹೋಮಿಯೋಪಥಿ ವಿಭಾಗ ಆರಂಭವಾಗಿದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವರು ಪ್ರಕೃತಿ, ಯುನಾನಿ ಹಾಗೂ ಹೊಮಿಯೊಪಥಿ ಚಿಕಿತ್ಸೆಗಾಗಿ ಇಲ್ಲಿಯ ವೈದ್ಯರನ್ನು ಸಂಪರ್ಕಿಸಬಹುದು.

ಆಸ್ಪತ್ರೆಯಲ್ಲಿ ಮೂವರು ವೈದ್ಯರಿದ್ದು ಪ್ರಕೃತಿ ಚಿಕಿತ್ಸೆಗೆ ಡಾ. ಪ್ರಕಾಶ ಎ.ಜೆ., ಯುನಾನಿ ವೈದ್ಯ ಪದ್ಧತಿಗೆ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ಡಾ. ಶ್ರೀದೇವಿ ಹೋಮಿಯೋಪಥಿ ಚಿಕಿತ್ಸೆ ಅವರನ್ನು ಸಂಪರ್ಕ ಮಾಡಬಹುದು.

ನೀರಿನ ಚಿಕಿತ್ಸೆ(ಹೈಡ್ರೊ ಥೆರಪಿ), ಆಯಸ್ಕಾಂತ ಚಿಕಿತ್ಸೆ (ಮೆಗ್ನೆಟೊ ಥೆರಪಿ), ಮರ್ದನ ಚಿಕಿತ್ಸೆ ( ಮಸಾಜ್), ಸೂರ್ಯಕಿರಣ ಮತ್ತು ಬಣ್ಣಗಳ ಚಿಕಿತ್ಸೆ (ಸನ್ ಅಂಡ ಕಲರ್ ಥೆರಪಿ), ಉಪವಾಸ ಮತ್ತು ಆಹಾರ ಚಿಕಿತ್ಸೆಗಳು (ಪಾಸ್ಟಿಂಗ್ ಅಂಡ್ ಫುಡ್ ಥೆರಪಿ), ಯೋಗ ಮತ್ತು ವ್ಯಾಯಾಮ ಚಿಕಿತ್ಸೆಗಳು, ಸೂಜಿ ಚಿಕಿತ್ಸೆ, ಬಿಂದೊತ್ತಡ ಮತ್ತು ಪಿಸಿಯೊ ಥೆರಪಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯವಿದೆ.

ದೀರ್ಘಕಾಲದ ರೋಗಗಳಿಗೆ ಯುನಾನಿ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನರಗಳಿಗೆ ಸಂಬಂಧಪಟ್ಟ ರೋಗ, ವೃದ್ಧಾಪ್ಯದಲ್ಲಿ ಬರುವ ರೋಗ ಮತ್ತು ಚರ್ಮ ರೋಗಗಳಿಗೆ ಅನುಗುಣವಾದ ಯುನಾನಿ ಪದ್ಧತಿಯ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ.

ನೆಗಡಿ, ಹಲ್ಲುನೋವು, ಕೆಮ್ಮು, ಗಂಟಲು ನೋವು, ವಸಡಿನ ನೋವು, ಅಜೀರ್ಣ, ಮಲಬದ್ಧತೆ, ಅತಿಸಾರ, ಗಾಯ ಮತ್ತು ಹುಣ್ಣು, ಸಕ್ಕರೆ ಕಾಯಿಲೆ ಹಾಗೂ ಉರಿ ಮೂತ್ರಕ್ಕೆ ಸುಲಭ ಮತ್ತು ಸರಳ ಚಿಕಿತ್ಸೆಯೂ ಯುನಾನಿ ಪದ್ಧತಿಯಲ್ಲಿ ಲಭ್ಯವಿದೆ.

ಪದೇಪದೇ ಬರುವ ಕೆಮ್ಮು, ಗಂಟಲು ನೋವು, ಜ್ವರ. ಮಕ್ಕಳಲ್ಲಿ ಮೂರ್ಚೆ ರೋಗ, ಮಕ್ಕಳು ರಚ್ಚೆ ಹಿಡಿಯುವುದು, ವಾಂತಿ, ಬೇಧಿ, ಅತಿಸಾರ, ಜಂತು ಹುಳುವಿನ ತೊಂದರೆ, ಬುದ್ಧಿಮಾಂದ್ಯ, ಚಂಚಲ ಮನಸ್ಸಿನ ಮಕ್ಕಳಿಗಾಗಿ ಹೋಮಿಯೋಪಥಿ ಚಿಕಿತ್ಸೆ ಇಲ್ಲಿದೆ. ಮಾಹಿತಿಗೆ ಡಾ. ಪ್ರಕಾಶ ಎ.ಜೆ.
(9480790690). ಡಾ ಮಲ್ಲಿಕಾರ್ಜುನ ಹಿರೇಮಠ (9481885134), ಡಾ. ಶ್ರೀದೇವಿ (9480323700) ಇವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.