ರೋಟರಿಯಿಂದ 75ಸಾವಿರ ನಿಘಂಟು ವಿತರಣೆ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ರೋಟರಿಯಿಂದ 75ಸಾವಿರ ನಿಘಂಟು ವಿತರಣೆ

Published:
Updated:

ಮದ್ದೂರು: ಮಕ್ಕಳಲ್ಲಿನ ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75ಸಾವಿರ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಲ್.ಗುರುಲಿಂಗಸ್ವಾಮಿ ಬುಧವಾರ ತಿಳಿಸಿದರು.ಸಮೀಪದ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಿದ ಅವರು, `ಶಬ್ಧಕೋಶವು ಜ್ಞಾನ ಭಂಡಾಡವಿದ್ದಂತೆ. ಶಬ್ದಸಂಪತ್ತು ಎಂದಿಗೂ ಮುಗಿಯಲಾರದ ಜ್ಞಾನ ಸಂಪತ್ತು ಆಗಿದ್ದು, ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಬಗೆಗಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಮುಖ್ಯಶಿಕ್ಷಕ ಕೆ.ಪಿ.ಜಯಮುದ್ದು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎಂ.ಎನ್.ಶಿವಣ್ಣ ಮಾತನಾಡಿದರು. ಸದಸ್ಯರಾದ ಜಿತೇಂದ್ರಸಿಂಗ್, ಬಿ.ಎನ್.ಕೇಶವ, ಶಿಕ್ಷಕರಾದ ಜಿ.ಜೆ.ಸುರೇಶ್, ಬಿ.ಎಸ್.ಮಹದೇವಸ್ವಾಮಿ, ಬಿ.ಎಲ್.ಮಧುಸೂದನ, ಜಿ.ಕೆ.ಮಾಲತಿ ಇತರರು ಭಾಗವಹಿಸಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry