ಬೆಂಗಳೂರು: ಯುವ ಆಟಗಾರ ರೋಹನ್ ಕ್ಯಾಸ್ಟಲಿನೊ ಹಾಗೂ ಕಿರಣ್ ಮೌಲಿ ಬಿ.ಆರ್. ಅವರು ಲೀ ನಿಂಗ್ ಸೀನಿಯರ್ ಫೈವ್ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ನಲ್ಲಿ ಶುಭಾರಂಭ ಮಾಡಿದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಐಎನ್ಸಿ ಕ್ಲಬ್ನ ರೋಹನ್ 21-11, 21-11ರಲ್ಲಿ ಬಿಸಿಐ ಕ್ಲಬ್ನ ಮಹೇಶ್ ಕುಮಾರ್ ಡಿ. ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಮುನ್ನಡೆದರು. ಇನ್ನೊಂದು ಪಂದ್ಯದಲ್ಲಿ ಕಿರಣ್ 16-13ರಲ್ಲಿ ಶಿವ ಕುಮಾರ್ (ನಿವೃತ್ತಿ) ಜಯ ಸಾಧಿಸಿದರು. ಮೊದಲ ಗೇಮ್ ಪೂರ್ಣಗೊಳಿಸಲಾಗದೇ ಪರದಾಡಿದ ಶಿವ ಕುಮಾರ್ ಪಂದ್ಯದಿಂದ ಹಿಂದೆ ಸರಿದ ಕಾರಣ ಕಿರಣ್ ಮುಂದಿನ ಸುತ್ತಿನ ಪ್ರವೇಶ ಸುಲಭವಾಯಿತು.

ಮೊದಲ ಸುತ್ತಿನ ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಅಭಿಷೇಕ್ ಯಲಿಗಾರ್ 21-15, 21-8ರಲ್ಲಿ ಹಾಸನದ ಅನಿಲ್ ಪ್ರಧಾನ್ ಬಿ.ಎಂ. ಮೇಲೂ, ಟಿ. ನಿಖಿಲ್ 21-11, 15-21, 21-13ರಲ್ಲಿ ಬೆಂಗಳೂರಿನ ಹರ್ಷ ಕುಮಾರ್ ವಿರುದ್ಧವೂ, ಭಾರತ ಕ್ರೀಡಾ ಪ್ರಾಧಿಕಾರದ ಸೂರಜ್ ಎನ್.ಆರ್. 21-7, 21-18ರಲ್ಲಿ ವಿನಯ್ ಹರಿ ಮೇಲೂ, ಪ್ರಕಾಶ್ ಕೆ. 11-21, 21-14, 21-7ರಲ್ಲಿ ರಾಮೇಶ್ವರ ಮಹಾಪಾತ್ರ ವಿರುದ್ಧವೂ, ವೆಂಕಟೇಶ್ ಪ್ರಸಾದ್ 21-11, 21-14ರಲ್ಲಿ ಮನೀಶ್ ಜೈನ್ ಮೇಲೂ, ಬಿ.ಆರ್. ಸಂಕೀರ್ತ್ 22-20, 21-9ರಲ್ಲಿ ಚಿರಾಗ್ ಎಲ್.ಯು. ವಿರುದ್ಧವೂ ಗೆಲುವು ಸಾಧಿಸಿದರು.

ನಿರಾಸೆ: ಡಬ್ಲ್ಯುಪಿಬಿಎ ಕ್ಲಬ್ನ ಅರುಣ್ ರಾಯ್ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿಯೇ ನಿರಾಸೆ ಅನುಭವಿಸಿದರು. ಧಾರವಾಡದ 15ನೇ ಶ್ರೇಯಾಂಕದ ಆಟಗಾರ ರಿಷಿಕೇಶ್ ಯಲಿಗಾರ್ 21-11, 21-15ರಲ್ಲಿ ಅರುಣ್ ಅವರನ್ನು ಸೋಲಿಸಿದರು.

ಇನ್ನಷ್ಟು ಪಂದ್ಯಗಳಲ್ಲಿ ಕಿರಣ್ ಕುಮಾರ್ ಜಿ. 21-14, 22-20ರಲ್ಲಿ ಎಂ. ಕಾರ್ತಿಕ್ ಮೇಲೂ, ಬಿಸಿಐ ಕ್ಲಬ್ನ ವಸಂತ್ ಕುಮಾರ್ ಎಚ್.ಆರ್. 21-15, 21-17ರಲ್ಲಿ ಜಿ. ಗಣೇಶ್ ವಿರುದ್ಧವೂ, ಎಸ್. ಡೇನಿಯಲ್ ಫರೀದ್ 21-13, 21-17ರಲ್ಲಿ ಕ್ರೀಡಾ ಪ್ರಾಧಿಕಾರದ ದರ್ಶನ್ ವರ್ಣೇಕರ್ ವಿರುದ್ಧವೂ, ಕೆ. ಕಾರ್ತಿಕೇಯ 19-21, 21-17, 21-3ರಲ್ಲಿ ಕೆ. ಲೋಕಸಾಯಿನಾಥ್ ಮೇಲೂ, ದಾವಣಗೆರೆಯ ಬಿ. ಪ್ರವೀಣ್ 21-18, 21-19ರಲ್ಲಿ ಮೈಸೂರಿನ ಸಚಿನ್ ಸಿ. ಗೌಡ ವಿರುದ್ಧವೂ, ಕ್ರೀಡಾ ಪ್ರಾಧಿಕಾರದ ಅಮಿತ್ ಕುಮಾರ್ 16-21, 21-14, 21-19ರಲ್ಲಿ ಮೋಹನ್ ಕುಮಾರ್ ಟಿ.ಎನ್. ಮೇಲೂ, ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.