ಭಾನುವಾರ, ಮೇ 16, 2021
22 °C

ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡ ಸೋಮ್, ಸಾನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಾಯಾಳುಗಳ ಪಟ್ಟಿ ಸೇರಿರುವ ಭಾರತದ ಸೋಮದೇವ್ ದೇವವರ್ಮನ್ ಹಾಗೂ ಸಾನಿಯಾ ಮಿರ್ಜಾ ಕ್ರಮವಾಗಿ ಎಟಿಪಿ ಮತ್ತು ಡಬ್ಲ್ಯುಟಿಎ ರ‌್ಯಾಂಕಿಂಗ್ ಪಟ್ಟಿಯ ಸಿಂಗಲ್ಸ್‌ನಲ್ಲಿ ಕುಸಿತ ಕಂಡಿದ್ದಾರೆ.ಈ ಮೊದಲು 81ನೇ ಸ್ಥಾನದಲ್ಲಿದ್ದ ಸಾನಿಯಾ ಈಗ 88ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. 65ನೇ ಸ್ಥಾನದಲ್ಲಿದ್ದ ಸೋಮದೇವ್ 70ನೇ ಸ್ಥಾನಕ್ಕೆ ಕುಸಿದಿದ್ದಾರೆ.ಇತ್ತೀಚಿಗೆ ನಡೆದ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಆಟಗಾರ್ತಿ ಆರಂಭದಲ್ಲಿಯೇ ನಿರಾಸೆ ಅನುಭವಿಸಿದ್ದರು. ಭುಜದ ನೋವಿನಿಂದ ಬಳಲುತ್ತಿರುವ ಸೋಮದೇವ್ ಟೋಕಿಯೋದಲ್ಲಿ ನಡೆದ ಜಪಾನ್ ವಿರುದ್ಧ ಡೇವಿಸ್ ಕಪ್ ಟೂರ್ನಿ ಆಡುವಾಗ ಗಾಯಗೊಂಡಿದ್ದರು. ಇದರಿಂದ ಅವರಿಗೆ ರಿವರ್ಸ್ ಸಿಂಗಲ್ಸ್‌ನ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮೊದಲಿನ ಸ್ಥಾನ ಉಳಿಸಿಕೊಂಡಿದ್ದಾರೆ. ಅವರು ಇತ್ತೀಚಿಗೆ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದರು.ಎಟಿಪಿ ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ (6), ಲಿಯಾಂಡರ್ ಪೇಸ್ (8) ರೋಹನ್ ಬೋಪಣ್ಣ (14) ಗಳಿಸಿದ್ದಾರೆ. ತಂಡ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಪೇಸ್ ಹಾಗೂ ಭೂಪತಿ ನಾಲ್ಕನೇ ಸ್ಥಾನ ಪಡೆದರೆ, ಬೋಪಣ್ಣ-ಐಸಾಮ್ ಉಲ್-ಹಕ್ ಖುರೇಷಿ ಏಳನೇ ಸ್ಥಾನ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.