ಸೋಮವಾರ, ಮಾರ್ಚ್ 1, 2021
31 °C
ಮಿಂಚಿದ ಕುಶಾಲ್; ದ. ಆಫ್ರಿಕಾಕ್ಕೆ ಆಘಾತ

ಲಂಕಾಕ್ಕೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಕಾಕ್ಕೆ ರೋಚಕ ಜಯ

ಚಿತ್ತಗಾಂಗ್‌ (ಪಿಟಿಐ): ಕುಶಾಲ್‌ ಪೆರೇರಾ (61) ಗಳಿಸಿದ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಶ್ರೀಲಂಕಾ ತಂಡದವರು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.ಜಹೂರ್‌ ಅಹ್ಮದ್‌ ಚೌಧರಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಿನೇಶ್‌ ಚಾಂಡಿಮಲ್‌ ಬಳಗ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಲಂಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 165 ರನ್‌ ಪೇರಿಸಿತು. ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್‌ ಗಳಿಸಿದ ದ. ಆಫ್ರಿಕಾ ಗೆಲುವಿನ ಅವಕಾಶವನ್ನು ಅಲ್ಪದರಲ್ಲಿ ಕಳೆದುಕೊಂಡಿತು.ಮಿಂಚಿದ ಕುಶಾಲ್‌ ಪೆರೇರಾ: ಎಡಗೈ ಬ್ಯಾಟ್ಸ್‌ಮನ್‌ ಕುಶಾಲ್‌ ಪೆರೇರಾ ಲಂಕಾ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಡೇಲ್‌ ಸ್ಟೇನ್‌ ಎಸೆದ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 17 ರನ್‌ ಕಲೆಹಾಕಿದರು. ಆದರೆ ಅದೇ ಓವರ್‌ನ ಅಂತಿಮ ಎಸೆತದಲ್ಲಿ ತಿಲಕರತ್ನೆ ದಿಲ್ಶಾನ್‌ (0) ಔಟಾದರು.ಮಾಹೇಲ ಜಯವರ್ಧನೆ (9) ಮತ್ತು ಕುಮಾರ ಸಂಗಕ್ಕಾರ (14) ಉತ್ತಮ ಆರಂಭ ಪಡೆದರೂ ಹೆಚ್ಚುಹೊತ್ತು ನಿಲ್ಲಲಿಲ್ಲ. ಮತ್ತೊಂದು ಬದಿಯಲ್ಲಿ ಪೆರೇರಾ ಅಬ್ಬರಿಸುತ್ತಿದ್ದ ಕಾರಣ ತಂಡದ ರನ್‌ವೇಗ ಕಡಿಮೆಯಾಗಲಿಲ್ಲ. 40 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.ಏಂಜೆಲೊ ಮ್ಯಾಥ್ಯೂಸ್‌ (43, 32 ಎಸೆತ, 3 ಬೌಂ, 1 ಸಿಕ್ಸರ್‌) ಕೊನೆಯಲ್ಲಿ  ಉತ್ತಮ ಆಟ ತೋರಿದರು. ದ. ಆಫ್ರಿಕಾ ತಂಡದ ಪರ ಇಮ್ರಾನ್‌ ತಾಹಿರ್‌ (26ಕ್ಕೆ 3) ಗಮನಾರ್ಹ ಪ್ರದರ್ಶನ ನೀಡಿದರು.ಲಂಕಾ ನೀಡಿದ ಗುರಿಯನ್ನು ದ. ಆಫ್ರಿಕಾ ತಂಡ ಸಕಾರಾತ್ಮಕ ರೀತಿಯಲ್ಲೇ  ಬೆನ್ನಟ್ಟತೊಡಗಿತು. ಹಾಶಿಮ್‌ ಆಮ್ಲಾ (23, 26 ಎಸೆತ) ಮೊದಲ ವಿಕೆಟ್‌ಗೆ ಕ್ವಿಂಟನ್‌ ಡಿ ಕಾಕ್‌ (25, 18 ಎಸೆತ) 32 ರನ್‌ ಸೇರಿಸಿದರು. ಜೆ.ಪಿ. ಡುಮಿನಿ (39, 30 ಎಸೆತ, 3 ಬೌಂ, 2 ಸಿಕ್ಸರ್‌) ಮತ್ತು ಆಮ್ಲಾ ಎರಡನೇ ವಿಕೆಟ್‌ಗೆ 60 ರನ್‌ ಕಲೆಹಾಕಿದರು.ದರೆ 10 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 75 ರನ್‌ ಗಳಿಸಿದ್ದ ತಂಡ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆಮ್ಲಾ ಮತ್ತು ಡುಮಿನಿ ವಿಕೆಟ್‌ ಪಡೆದ ಸಚಿತ್ರ ಸೇನನಾಯಕೆ (22ಕ್ಕೆ 2) ಲಂಕಾ ತಂಡಕ್ಕೆ ಮೇಲುಗೈ ತಂದಿತ್ತರು.ಲಸಿಂತ್‌ ಮಾಲಿಂಗ ಎಸೆದ ಆಂತಿಮ ಓವರ್‌ನಲ್ಲಿ ದ. ಆಫ್ರಿಕಾ ಗೆಲುವಿಗೆ 15 ರನ್‌ಗಳು ಬೇಕಿದ್ದವು. ಡೇವಿಡ್‌ ಮಿಲ್ಲರ್‌ ಕ್ರೀಸ್‌ನಲ್ಲಿದ್ದ ಕಾರಣ ಈ ತಂಡ ಗೆಲುವಿನ  ಕನಸನ್ನು ಸಂಪೂರ್ಣವಾಗಿ ಕೈಬಿಟ್ಟಿರಲಿಲ್ಲ. ಆದರೆ ಕೊನೆಯ ಓವರ್‌ನಲ್ಲಿ ಮಿಲ್ಲರ್‌ (19) ಒಳಗೊಂಡಂತೆ ಇಬ್ಬರು ರನೌಟಾದ ಕಾರಣ ಲಂಕಾ ರೋಚಕ ಗೆಲುವು ಪಡೆಯಿತು.

ರನ್‌

ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 165

ಕುಶಾಲ್‌ ಪೆರೇರಾ ಸಿ ಡಿವಿಲಿಯರ್ಸ್‌ ಬಿ ಇಮ್ರಾನ್‌ ತಾಹಿರ್‌  61

ತಿಲಕರತ್ನೆ ದಿಲ್ಶಾನ್‌ ಬಿ ಡೇಲ್‌ ಸ್ಟೇನ್‌  00

ಮಾಹೇಲ ಜಯವರ್ಧನೆ ಸಿ ಸ್ಟೇನ್‌ ಬಿ ಮಾರ್ನ್‌ ಮಾರ್ಕೆಲ್‌  09

ಕುಮಾರ ಸಂಗಕ್ಕಾರ ಸಿ ಸೊಸೊಬೆ ಬಿ ಇಮ್ರಾನ್‌ ತಾಹಿರ್‌  14

ಮ್ಯಾಥ್ಯೂಸ್‌ ಬಿ ಡೇಲ್‌ ಸ್ಟೇನ್‌  43

ದಿನೇಶ್‌ ಚಾಂಡಿಮಲ್‌ ಸ್ಟಂಪ್‌ ಡಿ ಕಾಕ್‌ ಬಿ ಇಮ್ರಾನ್‌ ತಾಹಿರ್‌  12

ತಿಸಾರ ಪೆರೇರಾ ಬಿ ಮಾರ್ಕೆಲ್‌  08

ನುವಾನ್‌ ಕುಲಶೇಖರ ಔಟಾಗದೆ  07

ಸಚಿತ್ರ ಸೇನನಾಯಕೆ ಔಟಾಗದೆ  01

ಇತರೆ: (ಲೆಗ್‌ಬೈ-3, ವೈಡ್‌-7)  10

ವಿಕೆಟ್‌ ಪತನ: 1-17 (ದಿಲ್ಶಾನ್‌; 0.6), 2-42 (ಜಯವರ್ಧನೆ; 4.2), 3-83 (ಸಂಗಕ್ಕಾರ; 9.5), 4-106 (ಕುಶಾಲ್‌ ಪೆರೇರಾ; 13.3), 5-137 (ಚಾಂಡಿಮಲ್‌; 16.5), 6-152 (ತಿಸಾರ ಪೆರೇರಾ; 18.3), 7-160 (ಮ್ಯಾಥ್ಯೂಸ್‌; 19.3)

ಬೌಲಿಂಗ್‌: ಡೇಲ್‌ ಸ್ಟೇನ್‌ 4-0-37-2, ಲೊನ್ವಾಬೊ ಸೊಸೊಬೆ 4-0-31-0, ಮಾರ್ನ್‌ ಮಾರ್ಕೆಲ್‌ 4-0-31-2, ಜೆಪಿ ಡುಮಿನಿ 2-0-13-0, ಅಲ್ಬಿ ಮಾರ್ಕೆಲ್‌ 2-0-24-0, ಇಮ್ರಾನ್‌ ತಾಹಿರ್‌ 4-0-26-3ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160

ಕ್ವಿಂಟನ್‌ ಡಿ ಕಾಕ್‌ ಬಿ ಮಾಲಿಂಗ  25

ಹಾಶಿಮ್‌ ಆಮ್ಲಾ ಸಿ ದಿಲ್ಶಾನ್‌ ಬಿ ಸಚಿತ್ರ ಸೇನನಾಯಕೆ  23

ಜೆಪಿ ಡುಮಿನಿ ಸಿ ದಿಲ್ಶಾನ್‌ ಬಿ ಸಚಿತ್ರ ಸೇನನಾಯಕೆ  39

ಎಬಿ ಡಿವಿಲಿಯರ್ಸ್‌ ಸಿ ಸಂಗಕ್ಕಾರ ಬಿ ಏಂಜೆಲೊ ಮ್ಯಾಥ್ಯೂಸ್‌  24

ಡೇವಿಡ್‌ ಮಿಲ್ಲರ್‌ ರನೌಟ್‌  19

ಅಲ್ಬಿ ಮಾರ್ಕೆಲ್‌ ಸಿ ಚಾಂಡಿಮಲ್‌ ಬಿ ಅಜಂತಾ ಮೆಂಡಿಸ್‌  12

ಫರ್ಹಾನ್‌ ಬೆಹರ್ದೀನ್‌ ಸಿ ಜಯವರ್ಧನೆ ಬಿ ನುವಾನ್‌ ಕುಲಶೇಖರ  05

ಡೇಲ್‌ ಸ್ಟೇನ್‌ ರನೌಟ್‌  00

ಮಾರ್ನ್‌ ಮಾರ್ಕೆಲ್‌ ಔಟಾಗದೆ  00

ಇಮ್ರಾನ್‌ ತಾಹಿರ್‌ ಔಟಾಗದೆ  08

ಇತರೆ: (ಲೆಗ್‌ಬೈ-3, ವೈಡ್‌-2)  05

ವಿಕೆಟ್‌ ಪತನ: 1-32 (ಡಿ ಕಾಕ್‌; 4.3), 2-82 (ಆಮ್ಲಾ; 10.5), 3-110 (ಡಿವಿಲಿಯರ್ಸ್‌; 13.6), 4-119 (ಡುಮಿನಿ; 15.4), 5-133 (ಅಲ್ಬಿ ಮಾರ್ಕೆಲ್‌; 16.4), 6-148 (ಬೆಹರ್ದೀನ್; 18.2), 7-151 (ಸ್ಟೇನ್‌; 19.1), 8-152 (ಮಿಲ್ಲರ್‌; 19.2)

ಬೌಲಿಂಗ್‌: ನುವಾನ್‌ ಕುಲಶೇಖರ 3-0-23-1, ಏಂಜೆಲೊ ಮ್ಯಾಥ್ಯೂಸ್‌ 3-0-21-1, ಸಚಿತ್ರ ಸೇನನಾಯಕೆ 4-0-22-2, ಲಸಿತ್‌ ಮಾಲಿಂಗ 4-0-29-1, ತಿಸಾರ ಪೆರೇರಾ 2-0-18-0, ಅಜಂತಾ ಮೆಂಡಿಸ್‌ 4-0-44-1

ಫಲಿತಾಂಶ: ಶ್ರೀಲಂಕಾಕ್ಕೆ 5 ರನ್‌ ಗೆಲುವು ಹಾಗೂ ಎರಡು ಪಾಯಿಂಟ್‌

ಪಂದ್ಯಶ್ರೇಷ್ಠ: ಕುಶಾಲ್‌ ಪೆರೇರಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.