ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ: ಮೂವರಿಗೆ ಗೌರವ

7

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ: ಮೂವರಿಗೆ ಗೌರವ

Published:
Updated:

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು 2010ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ರಾಯಚೂರಿನ ಹೀರಾಲಾಲ್ ಮಲ್ಕಾರಿ, ವಿಜಾಪುರದ ಪಿ.ಎಸ್.ಕಡೇಮನಿ ಹಾಗೂ ನಗರದ ಸುಧಾ ವೆಂಕಟೇಶ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.ಕಲಾ ಬಹುಮಾನಕ್ಕಾಗಿ ‘ಪ್ರಜಾವಾಣಿ’ಯ ಕಲಾವಿದ ಶಿವು ವಿ.ಹೂಗಾರ, ಬಸವರಾಜ ವಿ.ಕ. ಮಾಜಿ, ಕಾಶಿನಾಥ ವಿ.ಪತ್ತಾರ, ಅನಿಲ್ ಎಸ್.ಇಜೇರಿ, ಉದಯ ಡಿ.ಜೈನ್, ಎಚ್.ಮಂಜುನಾಥ್, ಟಿ.ಎಸ್.ಪ್ರತಿಭಾ, ಬಿ.ಎಚ್. ಲೋಕೇಶ್, ಸಂತೋಷ್ ಅಂಬರಕರ್, ಬಿ.ಎಸ್.ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಡಾ.ಜೆ.ಎಸ್. ಖಂಡೇರಾವ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry