ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರದ ವೆಂಕಟೇಗೌಡರಿಗೆ ಈಗ 65 ವರ್ಷ. ಆದರೆ ಬೇಸಾಯದಲ್ಲಿ ಅವರಿಗೆ ಇರುವ ಉತ್ಸಾಹ ಯುವಕರಿಗೆ ಸಮನಾದದ್ದು. ಹಲವು ದಶಕಗಳಿಂದ ರಾಗಿ, ಕಡಲೆಕಾಯಿ, ಹುರುಳಿ, ಭತ್ತ ಮುಂತಾದ ಆಹಾರದ ಬೆಳೆಗಳನ್ನು ಬೆಳೆಯುತ್ತಿದ್ದ ಗೌಡರಿಗೆ ಊಟಿಯ ರಂಗಸ್ವಾಮಿ ಎಂಬುವರು ಬೆಳ್ಳುಳ್ಳಿ ಬೆಳೆಯುವಂತೆ ಸಲಹೆ ನೀಡಿದರು.

ನಂತರ ಗೌಡರು ಊಟಿಯಲ್ಲಿ ಬೆಳ್ಳುಳ್ಳಿ ಬೆಳೆದು ಅನುಭವವಿರುವ ಇಬ್ಬರು ಕಾರ್ಮಿಕರನ್ನು ಕರೆಸಿಕೊಂಡು ಅವರಿಂದ ಸ್ಥಳೀಯ ಕಾರ್ಮಿಕರಿಗೆ ತರಬೇತಿ ಕೊಡಿಸಿ ನಂತರ ಬೆಳ್ಳುಳ್ಳಿ ಬೆಳೆಯಲು ಮುಂದಾದರು. ಗೌಡರಿಗೆ ಹದಿನೈದು ಎಕರೆ ಜಮೀನಿದೆ. ಐದು ಕೊಳವೆ ಬಾವಿಗಳಿವೆ. ವಿದ್ಯುತ್ತಿನ ಕಣ್ಣಾ ಮುಚ್ಚಾಲೆ ಆಟದಲ್ಲಿ ಬೆಳೆ ಒಣಗಿ ನಷ್ಟವಾಗುವುದನ್ನು ತಪ್ಪಿಸಲು ದೊಡ್ಡ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಕೊಳವೆ ಬಾವಿಗಳ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ಅಲ್ಲಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಿದ್ದಾರೆ.

ಗೌಡರು ಹನ್ನೆರಡು ಎಕರೆ ಭೂಮಿಯಲ್ಲಿ ಬೆಳ್ಳುಳ್ಳಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದರು. ಎರಡು ಸಲ ಭೂಮಿ ಉತ್ತು ಹದಮಾಡಿ, ಎಕರೆಗೆ 10 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ, 5 ಟ್ರ್ಯಾಕ್ಟರ್ ಕೆರೆಯ ಗೋಡು ಮಣ್ಣು ಹಾಕಿದರು. ಇಪ್ಪತ್ತು ದಿನ ಬಿಟ್ಟು ಊಟಿಯಿಂದ ತರಿಸಿದ ನಾಟಿ ತಳಿಯ ಬೆಳ್ಳುಳ್ಳಿ ಗೆಡ್ಡೆಯ ಬೀಜಗಳನ್ನು (ಕಳೆದ ಅಕ್ಟೋಬರ್ ತಿಂಗಳಲ್ಲಿ) ಬಿತ್ತಿದರು. ಪ್ರತಿ ಎಕರೆಗೆ 700 ಕೆ.ಜಿ. ಬಿತ್ತನೆ ಬೆಳ್ಳುಳ್ಳಿ ಬಿತ್ತನೆ ಬಳಸಿದ್ದಾರೆ.

ಬೆಳ್ಳುಳ್ಳಿ ಬೆಳೆಗೆ ಬರುವ ರೋಗಗಳ ನಿಯಂತ್ರಣಕ್ಕೆ ತಜ್ಞರು ಶಿಫಾರಸು ಮಾಡಿದ ಕೀಟನಾಶಕ ಸಿಂಪಡಿಸಿದರು. ಬೆಳೆಗೆ ಪೊಟಾಷ್, ಡಿಎಪಿ ಹಾಗೂ 17.17.17 ರಸಗೊಬ್ಬರಗಳನ್ನು ಹಾಕಿದರು. ಮಣ್ಣಿನ ಸವೆತ ತಡೆದು ಫಲವತ್ತತೆ ಹಾಗೂ ತೇವಾಂಶ ಕಾಪಾಡಲು ತುಂತುರು ನೀರಾವರಿ ಪದ್ಧತಿ ಅಳವಡಿಸಿದರು.

ಬೆಳ್ಳುಳ್ಳಿ ಗೆಡ್ಡೆಗಳು ಮೂರು ತಿಂಗಳಿಗೆ ಬಲಿಯುತ್ತವೆ. ಬಲಿತ ಬೆಳ್ಳುಳ್ಳಿ ಕೀಳುವ ಹಿಂದಿನ ದಿನ ಸ್ವಲ್ಪ ನೀರು ಹಾಯಿಸಿ ಭೂಮಿಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದರೆ ಬೆಳ್ಳುಳ್ಳಿ ಕೀಳುವುದು ಸುಲಭವಾಗುತ್ತದೆ. ಕಿತ್ತ ಗೆಡ್ಡೆಗಳನ್ನು ಅಲ್ಲಲ್ಲಿ ಗುಡ್ಡೆ ಹಾಕಿ, ಕುಡುಗೋಲಿನಿಂದ ಬೇರು ಹಾಗೂ ಕಾಂಡದ ಭಾಗವನ್ನು ಕತ್ತರಿಸಿ ನಂತರ ಟಾರ್ಪಾಲುಗಳ ಮೇಲೆ ಮೂರು ದಿನ ಒಣಗಿಸಿದರು.

ನಂತರ ಗೆಡ್ಡೆಗಳ ಮೇಲೆ ಗೋಣಿ ಚೀಲದ ಮೇಲ್ಪದರ ಹಾಕಿ ಉಜ್ಜಿ ಸಿಪ್ಪೆ ತೆಗೆದು ಶುಚಿಗೊಳಿಸಿ ನಂತರ ಗಾತ್ರಕ್ಕೆ ತಕ್ಕಂತೆ ವರ್ಗೀಕರಿಸಿದರು. ಗೌಡರ ಹೊಲದಲ್ಲಿ ಬೆಳೆದ ಪ್ರತಿ ಬೆಳ್ಳುಳ್ಳಿ ಗೆಡ್ಡೆ ಸರಾಸರಿ 40 ರಿಂದ 60 ಗ್ರಾಂ ತೂಕ ಇವೆ. ಎಕರೆಗೆ ನಾಲ್ಕು ಟನ್ ಇಳುವರಿ ಬಂದಿದೆ.

ಆರು ಎಕರೆಯಲ್ಲಿ ಬೆಳೆದ ಬಳ್ಳುಳ್ಳಿಯನ್ನು ಮೊದಲ ಹಂತದಲ್ಲಿ ಕೊಯ್ಲು ಮಾಡಿ ತಮಿಳುನಾಡಿನ ಮೆಟ್ಟುಪಾಳ್ಯಂನ ಮಾರುಕಟ್ಟೆಯಲ್ಲಿ ಹರಾಜು ಮೂಲಕ ಮಾರಾಟ ಮಾಡಿದ್ದಾರೆ. ಟನ್ಗೆ ಎರಡು ಲಕ್ಷ ರೂ. ಬೆಲೆ ಸಿಕ್ಕಿದೆ. 24 ಟನ್ ಮಾರಾಟ ಮಾಡಿದ್ದಾರೆ. ಒಂದು ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆಯಲು ಕನಿಷ್ಠ ಐದು ಲಕ್ಷ ರೂ ಖರ್ಚು ಬರುತ್ತದೆ. 30 ಲಕ್ಷ ರೂ ಬೇಸಾಯದ ಖರ್ಚು ಕಳೆದು 18 ಲಕ್ಷ ಆದಾಯ ಬಂದಿದೆ.

ವೆಂಕಟೇಗೌಡರು ತಮ್ಮ ಅಕ್ಕ ಪಕ್ಕದ ಹಳ್ಳಿಗಳ ರೈತರು ಬೆಳ್ಳುಳ್ಳಿಯನ್ನು ಬೆಳೆಯಲು ಸಹಕಾರಿಯಾಗುವಂತೆ ‘ಬೆಳ್ಳುಳ್ಳಿ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ರೈತರಿಗೆ ಬೇಸಾಯದ ಮಾಹಿತಿ ಕೊಡಿಸಿದರು.

ಬೆಳ್ಳುಳ್ಳಿ ಬೆಳೆದ ಅನುಭವ ಇಲ್ಲದವರು ಮೊದಲು ಸ್ವಲ್ಪ ಜಮೀನಿನಲ್ಲಿ ಬೆಳೆದು ಅನುಭವ ಪಡೆದನಂತರ ಹೆಚ್ಚಿನ ಭೂಮಿಯಲ್ಲಿ ಬೆಳೆಯುವ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು. ಆಸಕ್ತರು ವೆಂಕಟೇಗೌಡರನ್ನು ಸಂಪರ್ಕಿಸಿ ಅವರ ಜತೆಯಲ್ಲಿ ಮಾತನಾಡಬಹುದು. ಅವರ ಫೋನ್ ನಂಬರ್- 080 27200179.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.