ಮಂಗಳವಾರ, ಮೇ 11, 2021
21 °C

`ಲಾರಿ ಮಾಲೀಕರ ಹಿತರಕ್ಷಣೆಗೆ ಬದ್ಧ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಲಾರಿ ಹಾಗೂ ಇತರೆ ಸರಕು ಸಾಗಾಣಿಕೆ ವಾಹನದ ಮಾಲೀಕರ ಹಿತರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೆಷನ್‌ನ ವಿಭಾಗೀಯ ವ್ಯವಸ್ಥಾಪಕ ಟಿ.ಪಳಿನಿಕುಮಾರ ಹೇಳಿದರು.ಕಾರ್ಪೋರೆಷನ್‌ನ ಬಳ್ಳಾರಿ ವಿಭಾಗೀಯ ಕಚೇರಿಯಿಂದ ಶನಿವಾರ ಇಲ್ಲಿನ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡ ಸರಕು ಸಾಗಾಣಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಬಸವಕಲ್ಯಾಣದಲ್ಲಿ ಈ ಭಾಗದಲ್ಲಿಯೇ ಹೆಚ್ಚಿನ ಲಾರಿಗಳಿವೆ. ಆದ್ದರಿಂದ ವಿವಿಧ ಯೋಜನೆಗಳ ಬಗ್ಗೆ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಮಾಹಿತಿ ಇರುವುದು ಅವಶ್ಯಕವಾಗಿದೆ ಎಂದರು.ಕಾರ್ಪೋರೇಷನ್‌ನ ರಾಜ್ಯ ಘಟಕದ ವ್ಯವ್ಥಾಪಕ ಬಿ.ಆರ್.ಬಾಲಕೃಷ್ಣ ಮಾತನಾಡಿ, ಉತ್ಕೃಷ್ಟ ಸೇವೆ ಒದಗಿಸಿದರೂ ಅದನ್ನು ಪಡೆಯುವವರು ಬೇಕು ಎಂದರು. ವಾಹನ ಮಾಲೀಕರ ಹಿತಕ್ಕಾಗಿ ಎಕ್ಸಟ್ರಾ ಫ್ಲೀಟ್ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಇದರ ನೆರವಿನಿಂದ ವಿಮಾ ಸೌಲಭ್ಯ ಸಹ ಪಡೆಯಬಹುದು ಎಂದು ತಿಳಿಸಿದರು.ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಜರ ಅಲಿ ನವರಂಗ ಮಾತನಾಡಿ ಸರಕು ಸಾಗಾಣಿಕೆ ಉದ್ಯಮದ ಬೆಳವಣಿಗೆಗೆ ಕಾರ್ಪೋರೆಷನ್‌ನವರು ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೇಳಿಕೊಂಡರು.ಸುಂದರಂ ಫೈನಾನ್ಸ್ ವ್ಯವಸ್ಥಾಪಕ ರಾಮಲಿಂಗಂ, ವಕೀಲ ಅಲೀಮ್ ಅಂಜುಮ್ ಮಾತನಾಡಿದರು.

ಹೆಚ್ಚಿನ ವಹಿವಾಟು ನಡೆಸಿದ ದಯಾನಂದ ಶಾಶೆಟ್ಟೆ, ಸುಭಾಷ ಹೊಳಕುಂದೆ, ಪಂಡಿತರಾವ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.ಮಲ್ಲಿಕಾರ್ಜುನ ಹೊಳಕುಂದೆ, ಯಶ್ರಬ್ ಅಲಿ ಖಾದ್ರಿ, ಗಿರೀಶ ಹೊಳಕುಂದೆ, ಚನ್ನಬಸವ ನರಶೆಟ್ಟೆ, ಅಲ್ಲಮಪ್ರಭು ಹೊಳಕುಂದೆ, ಸೈಯದ್ ಅಲ್ತಾಫ್, ವೆಂಕಟೇಶ ಇದ್ದರು. ಶಿವಕುಮಾರ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.