ಅಮೆರಿಕದ ಅತ್ಯಂತ ಪ್ರತಿಷ್ಠಿತ ‘ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ’ ಸ್ಪರ್ಧೆಯಂತೆಯೇ ಭಾರತದಲ್ಲಿ ನಡೆಯುವ ಎಚ್ಡಿಎಫ್ಸಿ ಲೈಫ್ ಸ್ಪೆಲ್ ಬೀ ಇಂಡಿಯಾ ಸ್ಪೆಲ್ಸ್ 2011ನ ಬೆಂಗಳೂರು ಸುತ್ತಿನಲ್ಲಿ ಆರ್.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ಲಾವಣ್ಯ ಕೃಷ್ಣನ್ ವಿಜೇತರಾಗಿದ್ದಾರೆ.

ಅಂಬೇಡ್ಕರ್ ಭವನದಲ್ಲಿ ನಡೆದ ಬೆಂಗಳೂರು ನಗರ ಫೈನಲ್ ಸ್ಪರ್ಧೆಯಲ್ಲಿ 60 ಶಾಲೆಗಳ 400 ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಿ ಗೆಲುವು ಸಾಧಿಸಿದ ಲಾವಣ್ಯ, ಮುಂಬೈನಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಗೆಲ್ಲುವ ಸ್ಪರ್ಧಿ ತನ್ನ ಪೋಷಕರೊಂದಿಗೆ ವಾಷಿಂಗ್ಟನ್ನಲ್ಲಿ ನಡೆಯಲಿರುವ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ಣ ವೆಚ್ಚವನ್ನು ಬಹುಮಾನದ ರೂಪದಲ್ಲಿ ಪಡೆಯಲಿದ್ದಾರೆ.

ಎಚ್ಡಿಎಫ್ಸಿ ಲೈಫ್ ಸ್ಪೆಲ್ ಬೀ ಕುರಿತು ಮಾತನಾಡಿದ ಎಬಿಎಸ್ಐಎಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಪಾಂಡೆ, ಭಾರತದಲ್ಲಿ ಪ್ರಾಮುಖ್ಯತೆ ಪಡೆದ ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಾವಿಣ್ಯ ಪಡೆಯಲು ಈ ಸ್ಪರ್ಧೆ ಸಹಕಾರಿ ಎಂದರು.

ಸ್ಪರ್ಧೆಗೆ ಬೆಂಗಳೂರಿನಲ್ಲಿ ಲಭಿಸಿರುವ ಅಪಾರ ಪ್ರತಿಕ್ರಿಯೆಯಿಂದ ಸಂತಸವಾಗಿದೆ. ಇಂಗ್ಲಿಷ್ ಸ್ಪೆಲ್ಲಿಂಗ್, ಪದಗಳು, ಉಚ್ಚಾರಣೆ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಯುವ ಮನಸ್ಸುಗಳಲ್ಲಿರುವ ಉತ್ಸುಕತೆಯನ್ನು ಇದು ಬಿಂಬಿಸುತ್ತದೆ ಎಂದು ಎಚ್ಡಿಎಫ್ಸಿ ಲೈಫ್ನ ಮಾರುಕಟ್ಟೆ ಮತ್ತು ನೇರ ಚಾನಲ್ಗಳ ಮುಖ್ಯಸ್ಥ ಸಂಜಯ್ ತ್ರಿಪಾಠಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.