ಬೆಂಗಳೂರು: ನಿರೀಕ್ಷೆ ಸುಳ್ಳಾಗಲಿಲ್ಲ. ಎರಡನೇ ಸುತ್ತಿನಿಂದ ಮುನ್ನಡೆ ಕಾಯ್ದಕೊಂಡು ಬಂದಿದ್ದ ಬೆಂಗಳೂರಿನ ಅನಿರ್ಬನ್ ಲಾಹಿರಿ ಪಿಜಿಟಿಐ ಈಗಲ್ ಬರ್ಗ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಇನ್ನೊಬ್ಬ ಸ್ಪಳೀಯ ಗಾಲ್ಫರ್ ಎಸ್. ಚಿಕ್ಕರಂಗಪ್ಪ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಶುಕ್ರವಾರ ಈಗಲ್ಟನ್ ಗಾಲ್ಫ್ ಕೋರ್ಸ್ ನಲ್ಲಿ ಕೊನೆಗೊಂಡ ಟೂರ್ನಿಯಲ್ಲಿ ಲಾಹಿರಿ ಒಟ್ಟು (73, 62, 64, 69) 268 ಸ್ಕೋರ್ಗಳೊಂದಿಗೆ ತಮ್ಮ ಹೋರಾಟ ಕೊನೆಗೊಳಿಸಿದರೆ, ಚಿಕ್ಕರಂಗಪ್ಪ (72, 67, 66, 68) ಒಟ್ಟು 273 ಸ್ಕೋರ್ಗಳೊಂದಿಗೆ ಸ್ಪರ್ಧೆ ಅಂತಿಮಗೊಳಿಸಿದರು.

`ತವರೂರ ಕೋರ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದಕ್ಕೆ ಖುಷಿಯಾಗಿದೆ. ಆದರೆ, ಕೊನೆಯ ದಿನ ಆಡಿದ ಆಟದ ರೀತಿ ಖುಷಿ ನೀಡಿಲ್ಲ' ಎಂದು ಅನಿರ್ಬನ್ ನುಡಿದರು. ಪ್ರಶಸ್ತಿ ಜಯಿಸಿದ ಈ ಗಾಲ್ಫರ್ 4.84 ಲಕ್ಷ ರೂಪಾಯಿ ಬಹುಮಾನ ಜೇಬಿಗಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.