ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ ಕಲುಷಿತ: ಆತಂಕ

Last Updated 9 ಜುಲೈ 2013, 10:25 IST
ಅಕ್ಷರ ಗಾತ್ರ

ಗದಗ: ವೈದಿಕತೆ, ಅನ್ಯ ಧರ್ಮದ ಆಚರಣೆಗಳಿಂದ ಇಂದು ಲಿಂಗಾಯತ ಧರ್ಮ ಕಲುಷಿತಗೊಂಡಿದೆ ಎಂದು ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವಮಂಟಪದಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿಯವರ 133ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬಸವಧರ್ಮದ ಸಂಸ್ಕಾರಗಳು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶರಣರು 12ನೇ ಶತಮಾನದಲ್ಲೇ ಸರಳ ರೀತಿಯಲ್ಲಿ ಧರ್ಮದ ಆಚರಣೆಯ ತತ್ವಗಳನ್ನು ತಮ್ಮ ವಚನಗಳಲ್ಲಿ ಹಿಡಿದಿಡುವ ಮೂಲಕ ದಾರಿದೀಪವಾಗಿದ್ದಾರೆ. ಅನ್ಯ ಧರ್ಮದ ಪ್ರಭಾವದಿಂದ ಆಡಂಬರ, ಅನವಶ್ಯಕ ಖರ್ಚಿನ ಆಚರಣೆಗಳು ಹಾಸು ಹೊಕ್ಕಾಗಿರುವ ದಿನದಲ್ಲಿ ನಿಜವಾದ ಆಚರಣೆಗಳ ಮಹತ್ವ ಕಡಿಮೆ. ಆಡಂಬರ, ದುಂದುವೆಚ್ಚ ಸಮಾಜದಲ್ಲಿ ಬೇರೂರಿದ್ದು, ಅವುಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಬಸವ ಧರ್ಮದ ಸಂಸ್ಕಾರ ತಿಳಿದುಕೊಂಡಂತಹ ವಚನ ಮೂರ್ತಿಗಳು ರೂಪುಗೊಳ್ಳಬೇಕಾದ ಅವಶ್ಯಕತೆ ಇದೆ. ಹಿಂದೆ ಜಾತಿವಾದಿ ಪುರೋಹಿತಶಾಹಿಗಳಿಂದಾಗಿ ಬಸವಧರ್ಮದ ನಿಜವಾದ ಆಚರಣೆಗಳು ಪಕ್ಕಕ್ಕೆ ಸರಿದು, ವೈದಿಕರ ಅನವಶ್ಯಕ ಆಚರಣೆಗಳು ಜಾರಿಗೆ ಬಂದವು ಎಂದು ನುಡಿದರು.

ಎಸ್.ಎ. ಮುಗದ ಅವರಿಂದ ಸಾಮೂಹಿಕ ಇಷ್ಟಲಿಂಗಾರ್ಚನೆ ಪ್ರಾತ್ಯಕ್ಷಿಕೆ ನಡೆಯಿತು.  ಷಟ್‌ಸ್ಥಲ ಧ್ವಜಾರೋಹಣವನ್ನು ಕೊಪ್ಪಳದ ಡಾ. ಬಿ. ಜಿ. ಶಶಿಮಠ ನೆರವೇರಿಸಿದರು. ಬೋಧಕರಾದ ಅಶೋಕ ಭರಗುಂಡಿ, ಎಮ್. ಎ. ಹಂಚಿನಾಳ, ಬಸವರಾಜ ವೆಂಕಟಾಪೂರ, ಪ್ರೊ.ಜಿ.ಬಿ. ಹಳ್ಯಾಳ,  ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಎನ್. ಬಡಿಗಣ್ಣವರ ಅವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಹೊಸಪೇಟೆಯಿಂದ ಬಸವರಾಜ ಹಾಗೂ ಸಂಗಡಿಗರು, ತೋರಣಗಲ್ಲಿನಿಂದ ನಾಗಪ್ಪಾ ಐಗಳ ಸರ್ ಹಾಗೂ ಸಂಗಡಿಗರು, ಕೊಪ್ಪಳದಿಂದ ಎಲ್. ಬಿ. ಲಿಂಗನಗೌಡ್ರ, ರಾಜೇಶ ಹಾಗೂ ಸಂಗಡಿಗರು, ಬಳ್ಳಾರಿಯಿಂದ ಶಿವಾನಂದ ಹೊಂಬಳ ಹಾಗೂ ಸಂಗಡಿಗರು, ಹುಬ್ಬಳ್ಳಿ, ಗಜೇಂದ್ರಗಡ, ಸೊರಟೂರ, ಕಳಸಾಪೂರದಿಂದ ಭಕ್ತರು ಆಗಮಿಸಿದ್ದರು. ವಧು-ವರರ ಮಾಹಿತಿ ಕೇಂದ್ರವನ್ನು ತೆರಯಲಾಯಿತು.

ಬಸವದಳ ಅಧ್ಯಕ್ಷ ಎಮ್.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸಿದ್ದರು. ಎನ್. ಚ್. ಹಿರೇಸಕ್ಕರಗೌಡ್ರ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು.  ಪಾರ್ವತೆಮ್ಮ ಅಂಗಡಿ, ರೇಣುಕಾ ಕರೆಗೌಡ್ರ, ಲೀಲಾವತಿ ಬಳ್ಳೊಳ್ಳಿ, ಪಾರ್ವತೆಮ್ಮ ಬುರ್ಲಿ, ನೀಲಮ್ಮ ಬೇವಿನಮರದ, ರೇಣಮ್ಮ ರಾಮನಗೌಡ್ರ, ಸರೋಜಕ್ಕ ಮುಗದ, ನಾಗರತ್ನ ಅಸುಂಡಿ, ಲಕ್ಷ್ಮೀ ಅಂಗಡಿ, ಈರಮ್ಮ ಮಾನ್ವಿ, ಮಂಜುಳಾ ಹಾಸಿಲಕರ, ಸುಮಂಗಳ ಹೊಸಅಂಗಡಿ, ಶರಣರಾದ ಎಲ್. ಎಚ್. ನಾಗನಾತ, ಎಸ್.ಬಿ.ಸುಂಕದ, ಎಸ್. ಎನ್.ಹಕಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT