ಲಿಬಿಯಾ: ಸರ್ಕಾರ ರಚನೆಗೆ ಕಸರತ್ತು

7

ಲಿಬಿಯಾ: ಸರ್ಕಾರ ರಚನೆಗೆ ಕಸರತ್ತು

Published:
Updated:

ಬೆಂಗಾಝಿ(ಎಎಫ್‌ಪಿ): ವಿಮೋಚನೆಗೊಂಡ ಲಿಬಿಯಾದಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಒಳಗೊಂಡ ಮಧ್ಯಂತರ ಸರ್ಕಾರ ರಚಿಸುವ ಭಾರಿ ಕಸರತ್ತು ಆರಂಭವಾಗಿದ್ದು, 42 ವರ್ಷಗಳ ಗಡಾಫಿಯ ಕಪಿಮುಷ್ಠಿ ಆಡಳಿತದಿಂದ ಮುಕ್ತವಾಗಿ ಇಸ್ಲಾಮಿಕ್ ಶರಿಯತ್ ಕಾನೂನಿನ ಆಡಳಿತಕ್ಕೆ ಒಳಪಡಲು ಸಿದ್ಧತೆಗಳು ನಡೆದಿವೆ.ಎಂಟು ತಿಂಗಳ ಹಿಂದೆ ಬಂಡಾಯ ಆರಂಭವಾದ  ಬೆಂಗಾಝಿ ನಗರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಸಹಸ್ರಾರು ಜನರ ಎದುರಿಗೆ ಲಿಬಿಯಾ ವಿಮೋಚನೆಯನ್ನು ಪ್ರಕಟಿಸಿ ಮಾತನಾಡಿದ ಅವರು, ಹೊಸ ಸಂವಿಧಾನವನ್ನು ಸಿದ್ಧಪಡಿಸಿ ಒಪ್ಪಿಕೊಂಡು ನೂತನವಾದ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ ಎಂದು ರಾಷ್ಟ್ರೀಯ ಸಂಧಿ ಕಾಲದ ಮಂಡಲಿಯ ಉಪಾಧ್ಯಕ್ಷ ಅಬ್ದುಲ್ ಹಫೀಜ್ ಗೊಗಾ ಅವರು ತಿಳಿಸಿದ್ದಾರೆ.`ಲಿಬಿಯಾ ವಿಮೋಚನೆ ಘೋಷಣೆಯು ನೀವು ತಲೆ ಎತ್ತಿ ನಿಲ್ಲುವಂತೆ ಮಾಡಿದೆ ಮತ್ತು ನೀವು ಈಗ ಸ್ವತಂತ್ರರು~ ಎಂದು ಗೊಗಾ ತಿಳಿಸಿದಾಗ ನೆರೆದಿದ್ದ ಸಹಸ್ರಾರು ಜನರು `ನಾವು ಸ್ವತಂತ್ರ ಲಿಬಿಯಾ ಪ್ರಜೆಗಳು~ ಎಂದು ಒಕ್ಕೊರಲಿನಿಂದ ಕೂಗಿದರು.  ಒಂದು ತಿಂಗಳಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ. ನಂತರ ಸಂವಿಧಾನ ರಚನಾ ಮಂಡಳಿ ನೇಮಕವಾಗಿ ಎಂಟು ತಿಂಗಳಲ್ಲಿ ಸಂವಿಧಾನ ಸಿದ್ಧವಾಗಲಿದೆ. ಬಳಿಕ 20 ತಿಂಗಳಲ್ಲಿ  ಪ್ರಜಾಸತಾತ್ಮಕವಾದ ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry